15 ದಿನಗಳವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟವನ್ನು ದುಬೈ ಸ್ಥಗಿತಗೊಳಿಸಿದೆ. ಅಕ್ಟೋಬರ್ 2ರವರೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈಗೆ ಹಾರುವುದಿಲ್ಲ. ವಿಮಾನದಲ್ಲಿ ಕೊರೊನಾ ಸೋಂಕಿತ ಕಂಡು ಬಂದಿದ್ದು ಇದಕ್ಕೆ ಕಾರಣವಾಗಿದೆ.
ಸೆಪ್ಟೆಂಬರ್ 4 ರಂದು ಜೈಪುರ – ದುಬೈ ವಿಮಾನದಲ್ಲಿ ಕೊರೊನಾ ಸೋಂಕಿತ ಪ್ರಯಾಣಿಸಿದ್ದು, ಪತ್ತೆ ಯಾದ ನಂತ್ರ ದುಬೈ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದು ಎರಡನೇ ಬಾರಿ ಎಂದು ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ಹೇಳಿದೆ. ಈ ಬಗ್ಗೆ ಏರ್ ಇಂಡಿಯಾ ಸ್ಪಷ್ಟ ವಿವರಣೆಯನ್ನು ನೀಡಬೇಕಾಗಿದೆ. ಹಾಗಾದಲ್ಲಿ ಮಾತ್ರ 15 ದಿನಗಳ ಅಮಾನತಿನ ನಂತ್ರ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಪುನರಾರಂಭಗೊಳ್ಳಲು ಅವಕಾಶ ಸಿಗಲಿದೆ.
ಆಗಸ್ಟ್ ನಲ್ಲಿ ಹಾಂಕಾಂಗ್ ನಿಂದ ಪ್ರಯಾಣ ಬೆಳೆಸಿದ್ದ ಕೆಲ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ನಂತ್ರ ಏರ್ ಇಂಡಿಯಾ ತಾತ್ಕಾಲಿಕವಾಗಿ ಹಾಂಕಾಂಗ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು.