ಫ್ಲೋರಿಡಾ: ಸ್ನೇಹಕ್ಕೆ ಸಾಟಿಯಿಲ್ಲ. ಭಾಷೆ, ಜಾತಿಯ ಹಂಗಿಲ್ಲ. ಸ್ನೇಹಿತರಿಬ್ಬರ ಆ ಭೇಟಿಯ ಕ್ಷಣ ಅತ್ಯಂತ ಸಂತೋಷದ ದಿನವಾಗಿರುತ್ತದೆ.
ಇಲ್ಲಿ ಸ್ನೇಹಿತರಿಬ್ಬರು ಆರು ವರ್ಷದಿಂದ ಭೇಟಿಯಾಗುತ್ತಿದ್ದಾರೆ. ಮಾತಿಲ್ಲ, ಕತೆಯಿಲ್ಲ….. ಆದರೆ, ಅವರ ಸ್ನೇಹದ ಭಾಷೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಯಾರವರು..?
ಅದು ಮನುಷ್ಯರಲ್ಲ. ನಾಯಿ ಹಾಗೂ ಡಾಲ್ಫಿನ್ ನ ಸ್ನೇಹ!!
ಕೆನ್ಯಾದ ಫ್ಲೊರಿಡಾದಲ್ಲಿ ಡಾಲ್ಫಿನ್ ರಿಸರ್ಚ್ ಸೆಂಟರ್ ನಲ್ಲಿ ಗನ್ನರ್ ಎಂಬ ನಾಯಿ ಡೆಲ್ಟಾ ಎಂಬ ಡಾಲ್ಫಿನ್ ಇಬ್ಬರೂ ಭೇಟಿಯಾಗುತ್ತಾರೆ.
ಗನ್ನರ್ 8 ವಾರಗಳ ಮರಿ, ಡೆಲ್ಟಾ ನಾಲ್ಕು ವರ್ಷವಿದ್ದಾಗ ಇಬ್ಬರ ಸ್ನೇಹ ಬೆಳೆಯಿತು. 6 ವರ್ಷದ ಹಿಂದೆ ಇಬ್ಬರ ಗೆಳೆತನದ ಫೋಟೋ ತೆಗೆಯಲಾಗಿತ್ತು. ಈಗ ಅದೇ ಜಾಗದಲ್ಲಿ ಮತ್ತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಡೆಲ್ಟಾ ನೀರಿನಿಂದ ಮೇಲೆ ಬಂದು ಮುಖವೆತ್ತಿ ತನ್ನ ಸ್ನೇಹಿತನಿಗಾಗಿ ಕಾಯುತ್ತದೆ. ಗನ್ನರ್ ಡೆಲ್ಟಾನ ಮುಖವನ್ನು ನೆಕ್ಕಿ ಪ್ರೀತಿ ವ್ಯಕ್ತಪಡಿಸುವ ಫೋಟೋಗಳಿವೆ. ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲಿ ಈ ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ.
https://twitter.com/_woollyback/status/1273295000126750721?ref_src=twsrc%5Etfw%7Ctwcamp%5Etweetembed%7Ctwterm%5E1273295000126750721&ref_url=https%3A%2F%2Fwww.ndtv.com%2Foffbeat%2Fdrop-everything-and-look-at-this-dog-meeting-his-best-friend-a-dolphin-2248945
https://www.facebook.com/DolphinResearchCenter/photos/a.90071708777/10157796122888778/?type=3