ಜ್ವಾಲಾಮುಖಿ ಸ್ಫೋಟ ಅಂದರೇನೆ ಸಾಕು ಅದು ಎಷ್ಟು ಭಯಾನಕ ಅನ್ನೋದನ್ನ ನಾವು ಊಹಿಸಿಕೊಳ್ಳಬಹುದು. ಅದೇ ರೀತಿ ಯುರೋಪ್ನ ಐಸ್ಲ್ಯಾಂಡ್ನಲ್ಲಿ ಬರೋಬ್ಬರಿ 900 ವರ್ಷಗಳ ಬಳಿಕ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈಗಾಗಲೇ ಈ ಜ್ವಾಲಾಮುಖಿ ಸ್ಫೋಟದ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಟ್ರಾವೆಲ್ ಬ್ಲಾಗರ್ ಆಗಿರುವ ಜಾರ್ನ್ ಸ್ಟೈನ್ಬೆಕ್ ಎಂಬವರು ಫಾಗ್ರಾಡಾಲ್ಸ್ಫಾಲ್ ನಲ್ಲಿ ನಡೆದ ಜ್ವಾಲಾಮುಖಿ ಸ್ಫೋಟದ ಸಾಕಷ್ಟು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಎಬಿಸಿ ನ್ಯೂಸ್ನ ವರದಿಯ ಪ್ರಕಾರ ಈ ಲಾವಾರಸವು ಎಷ್ಟು ಪ್ರಕಾಶಮಾನವಾಗಿತ್ತು ಅಂದರೆ ಜ್ವಾಲಾಮುಖಿ ಸ್ಫೋಟ ನಡೆದ ಸ್ಥಳದಿಂದ 32 ಕಿಲೋಮೀಟರ್ ದೂರದಲ್ಲಿರುವ ರೆಕ್ಜಾವಿಕ್ನಲ್ಲೂ ಲಾವಾರಸ ಪ್ರಕಾಶಮಾನವಾಗಿ ಗೋಚರವಾಗಿದೆ.
ಜ್ವಾಲಾಮುಖಿ ಸ್ಫೋಟದ ಡ್ರೋಣ್ ದೃಶ್ಯಾವಳಿಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ಗ್ರಾಫರ್ ಹಾಗೂ ಯುಟ್ಯೂಬರ್ ಆಂಥೋನಿ ಕ್ವಿಂಟಾನೋ ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿ, ವಾವ್..! ಫಾಗ್ರಾಡಾಲ್ಸ್ಫಾಲ್ನಲ್ಲಿ ನಡೆದ ಜ್ವಾಲಾಮುಖಿ ಸ್ಫೋಟದ ಡ್ರೋಣ್ ದೃಶ್ಯಾವಳಿ. ಕೊನೆಯವರೆಗೂ ಈ ವಿಡಿಯೋ ನೋಡಿ ಎಂದು ಶೀರ್ಷಿಕೆ ನೀಡಿದ್ದಾರೆ.
https://www.facebook.com/steinbekk/videos/10224917275784355/?t=12