ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಎಲ್ಲೆಡೆ ನೆಲೆಸಿರುವ ಡಲ್ ಮೂಡ್‌ನಿಂದ ಹೊರಬರಲು ಜನರಿಗೆ ತನ್ನ ಕೈಲಾದ ಮಟ್ಟದಲ್ಲಿ ನೆರವಾಗಲು ಮುಂದಾಗಿರುವ ಗ್ರೀಸ್‌ನ ಟ್ಯಾಕ್ಸಿ ಚಾಲಕರೊಬ್ಬರು ತಮ್ಮ ಕ್ಯಾಬ್ ಅನ್ನೇ ತಾತ್ಕಾಲಿಕ ನೈಟ್ ಕ್ಲಬ್ ಮಾಡಿಬಿಟ್ಟಿದ್ದಾರೆ.
ಉತ್ತರ ಗ್ರೀಸ್‌ನ ತೆಸ್ಸಲೋನಿಕಿ ನಗರದಲ್ಲಿ ಟ್ಯಾಕ್ಸಿ ಚಾಲಕರಾಗಿರುವ ಕಾನ್‌ಸ್ಟಾಂಟಿನೋಸ್ ಬೇಕಿಯೋ ಈ ಬಗ್ಗೆ ಮಾತನಾಡಿ, “ಜನರಿಗೆ ಬಹಳ ಸ್ಟ್ರೆಸ್ ಆಗಿ ಎಲ್ಲರೂ ಕೆಟ್ಟ ಮೂಡ್‌ನಲ್ಲಿರುವುದನ್ನು ನೋಡಿದ್ದೆ. ಮ್ಯೂಸಿಕ್ ಆನ್ ಮಾಡಿ, ವಾಲ್ಯೂಮ್ ಜೋರಾಗಿ ಕೊಟ್ಟು ಜನರು ಎಂಜಾಯ್ ಮಾಡುವುದನ್ನು ನೋಡಬೇಕೆಂದು ಅಂದುಕೊಂಡೆ. ಜನರಿಗೆ ಮೋಜು ಮಾಡಲು ಅವಕಾಶ ಸಿಕ್ಕರೆ ಖುಷಿ ಪಡುತ್ತಾರೆ. ಹೀಗೆ ನಾವು ಟ್ಯಾಕ್ಸಿಯನ್ನೇ ಪ್ರೈವೇಟ್ ಕ್ಲಬ್ ಆಗಿ ಮಾಡಿದ್ದೇನೆ” ಎಂದಿದ್ದಾರೆ.
ಯೂರೋಪಿನ ಇತರ ದೇಶಗಳಷ್ಟು ಕೆಟ್ಟದಾಗಿ ಕೋವಿಡ್-19 ಸೋಂಕಿನಿಂದ ನರಳದೇ ಇದ್ದರೂ ಸಹ ಮುನ್ನೆಚ್ಚರಿಕೆ ಕ್ರಮವಾಗಿ ತನ್ನೆಲ್ಲಾ ನೈಟ್ ಲೈಫ್ ಚಟುವಟಿಗಳ ಮೇಲೆ ಕಳೆದ ನವೆಂಬರ್‌ನಿಂದ ನಿರ್ಬಂಧ ಹೇರಿದೆ ಗ್ರೀಸ್.