ಪ್ರಕೃತಿ ಕರೆ ಬಂದರೆ ಎಂಥವರಿಗೂ ತಡೆದುಕೊಳ್ಳುವುದು ಕಷ್ಟ. ಇದೇ ರೀತಿ ಚಾಲಕನೊಬ್ಬನಿಗೆ ತುಂಬಾ ಅವಸರವಾಗಿದೆ. ಆದರೆ, ಅಲ್ಲೆಲ್ಲೂ ಹೋಗಲಾಗದ ಕಾರಣ 115 ಕಿ.ಮೀ. ವೇಗದಲ್ಲಿ ಕಾರು ಓಡಿಸಿದ್ದೇ ಈಗ ಪೊಲೀಸರ ವಿಚಾರಣೆ ಎದುರಿಸುವಂತೆ ಮಾಡಿದೆ.
ಲಂಡನ್ ನಿಂದ ದಕ್ಷಿಣ ಯಾರ್ಕ್‌ಶೈರ್ ಗೆ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ತುಂಬಾ ಅವಸರವಾಗಿತ್ತಂತೆ. ಹೀಗಾಗಿ ಅತೀ ವೇಗವಾಗಿ ಬಂದು ಪೊಲೀಸರ ಕೈಗೆ ತಗಲ್ಹಾಕಿಕೊಂಡಿದ್ದಾನೆ. ಬಳಿಕ ಪ್ರಕೃತಿ ಕರೆ ಎಂದು ಸಮಜಾಯಿಷಿಯನ್ನೂ ಕೊಟ್ಟಿದ್ದಾನೆ. ಪೊಲೀಸರು ಮಾತ್ರ ಇದನ್ನು ನಂಬುವ ಪರಿಸ್ಥಿತಿಯಲ್ಲಿರಲಿಲ್ಲ.
ಆತ ತನ್ನ ಆಸನದಲ್ಲಿ ಬಹಳ ಆರಾಮಾಗಿಯೇ ಕುಳಿತಿದ್ದ. ಹೀಗಾಗಿ ಈತನಿಗೆ ಆ ರೀತಿಯ ಯಾವುದೇ ಮುನ್ಸೂಚನೆ ಕಾಣಲಿಲ್ಲ ಎಂಬುದು ಪೊಲೀಸರ ವಾದ. ಅಲ್ಲಿನ ಕಾನೂನಿನ ಪ್ರಕಾರ 45 ಕಿ.ಮೀ.ವೇಗದಲ್ಲಿ ಮಾತ್ರ ವಾಹನವನ್ನು ಚಲಾಯಿಸಬೇಕು. ಹೀಗಾಗಿ ಕೊನೆಗೆ ಚಾಲಕನನ್ನು ಕೋರ್ಟ್ ಗೆ ಕರೆದೊಯ್ದು, ದಂಡ ಕಟ್ಟಿಸಿಕೊಂಡು ಬಿಟ್ಟು ಕಳಿಸಲಾಗಿದೆ.
https://www.facebook.com/sypoperationalsupport/posts/1226739234371328