ಕ್ಯಾನ್ಸರ್ ರೋಗಿಗಾಗಿ ಬ್ಯಾಟ್ ಮ್ಯಾನ್ ವೇಷ ಧರಿಸಿದ ವೈದ್ಯ 18-11-2020 3:45PM IST / No Comments / Posted In: Latest News, International ಪುಟಾಣಿ ಕ್ಯಾನ್ಸರ್ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್ಮ್ಯಾನ್ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ, ವೈದ್ಯರ ಬಳಿ ತಾನು ಬ್ಯಾಟ್ ಮ್ಯಾನ್ನ್ನ ಭೇಟಿಯಾಗಬೇಕೆಂದುಕೊಂಡಿದ್ದೇನೆ ಎಂದು ಹೇಳಿಕೊಂಡಿದೆ. ಮಾರನೇ ದಿನವೇ ವೈದ್ಯ ಬ್ಯಾಟ್ಮ್ಯಾನ್ ವೇಷ ಧರಿಸಿ ಮಗುವಿನ ಮುಂದೆ ಹಾಜರಾಗಿದ್ದಾರೆ. ತಾನು ನಿಜವಾದ ಬ್ಯಾಟ್ಮ್ಯಾನ್ನ್ನೇ ಭೇಟಿ ಮಾಡಿದೆ ಎಂಬ ಖುಷಿಯಲ್ಲಿ ಮಗು ಇರೋದನ್ನ ನೀವು ನೋಡಬಹುದು. ಈ ವಿಡಿಯೋ ನೋಡಿದ ಟ್ವೀಟಿಗರು ವೈದ್ಯರು ದೇವರಿದ್ದಂಗೆ ಎಂದಿದ್ದಾರೆ.