ಅಮೆರಿಕದಲ್ಲಿ ಆಘಾತಕಾರಿ ಘಟನೆ ನಡೆದಿದೆ. ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬನ ವಿರುದ್ಧ ತಾಯಿ ಹತ್ಯೆ ಹಾಗೂ ಕಿರುಕುಳದ ದೂರು ದಾಖಲಾಗಿದೆ. ಆರೋಪಿ ಹೆಸರು ಪುಷ್ಕರ್ ಶರ್ಮಾ. ಪೊಲೀಸರು ಪುಷ್ಕರ್ ನನ್ನು ಬಂಧಿಸಿದ್ದಾರೆ.
28 ವರ್ಷದ ಪುಷ್ಕರ್ ಶರ್ಮಾ, ತಾಯಿ ಸರೋಜಾ ಶರ್ಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತು ಹಿಸುಕಿದ್ದಾನೆ. ತಾಯಿ ಕೆಳಗೆ ಬೀಳ್ತಿದ್ದಂತೆ ಕಿರುಕುಳ ನೀಡಿದ್ದಾನೆ. ತಾಯಿ ಮೊದಲು ಪ್ರಜ್ಞೆ ಕಳೆದುಕೊಂಡಿದ್ದು, ನಂತ್ರ ಸಾವನ್ನಪ್ಪಿದ್ದಾಳೆ. ನಂತ್ರ ಪೊಲೀಸ್ ಠಾಣೆಗೆ ತಲುಪಿದ ಆರೋಪಿ, ಪೊಲೀಸರಿಗೆ ಶರಣಾಗಿದ್ದಾನೆ.
ಪುಷ್ಕರ್ ಶರ್ಮಾ ಮಾನಸಿಕ ಅಸ್ವಸ್ಥತೆ ಎದುರಿಸುತ್ತಿದ್ದಾನೆಂದು ಹೇಳಲಾಗಿದೆ. ನಿದ್ರೆಯಿಂದ ಎದ್ದ ನಂತ್ರ ಯಾರ ಮೇಲಾದ್ರೂ ಹಲ್ಲೆ ನಡೆಸಬೇಕೆಂಬ ಆಸೆ ಹೆಚ್ಚಾಗಿತ್ತಂತೆ. ಆಗ ಸಿಕ್ಕ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ತಾಯಿ ಕೆಳಗೆ ಬೀಳುವವರೆಗೂ ಪುಷ್ಕರ್ ಶರ್ಮಾ ತನ್ನನ್ನು ತಾನು ಮರೆತಿದ್ದನಂತೆ. ತಾಯಿ ಪ್ರಜ್ಞೆ ತಪ್ಪಿ ಕೆಳಗೆ ಬೀಳ್ತಿದ್ದಂತೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.