
ಮನೆಯಲ್ಲಿ ಹಿರಿಯರಿದ್ದರೆ ಮಕ್ಕಳಿಗೆ ಅದೇನೋ ಖುಷಿ. ಅಜ್ಜ – ಅಜ್ಜಿಯರು ಮೊಮ್ಮಕ್ಕಳ ಬೆಂಬಲಕ್ಕೆ ಸದಾ ಇರುವುದು ನಾವೆಲ್ಲ ನೋಡಿದ್ದೇವೆ. ಮೊಮ್ಮಕ್ಕಳು ದೊಡ್ಡವರಾದ ಮೇಲೆ ಅವರೊಂದಿಗೆ ಸ್ನೇಹಿತರ ರೀತಿಯಾಗುವ ಅಜ್ಜಂದಿರು, ಅವರ ಬೆಂಬಲಕ್ಕೆ ಸದಾ ನಿಲ್ಲುತ್ತಾರೆ.
ಮೊಮ್ಮಕ್ಕಳ ಬೆಂಬಲಕ್ಕೆ ಮಾತ್ರವಲ್ಲದೇ, ಅವರೊಂದಿಗೆ ಹಲವು ಅಮೂಲ್ಯ ಕ್ಷಣಗಳನ್ನು ಕಳೆಯುತ್ತಾರೆ. ಇದೇ ರೀತಿಯ ಕ್ಷಣದ ಬಗ್ಗೆ ಮ್ಯಾಟ್ ಎನ್ನುವವರು ಟ್ವಿಟ್ ಮಾಡಿದ್ದಾರೆ. ಮನೆಯ ಮುಂದಿರುವ ಸಿಸಿ ಕ್ಯಾಮರಾದ ಮುಂದೆ ಬಂದಿರುವ ಮ್ಯಾಟ್ ಅಜ್ಜ-ಅಜ್ಜಿ, ಎಲ್ಲ ಬಿಯರ್ ಹೀರಿದ್ದೇವೆ. ನಿನಗೆ ಉಳಿಸಿಲ್ಲ ಎಂದಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಅವರು ಅಮೂಲ್ಯ ಕ್ಷಣವೆಂದು ಕರೆದಿದ್ದಾರೆ.
ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಅನೇಕರು ತಮ್ಮ ಅಜ್ಜ-ಅಜ್ಜಿಯಂದಿರ ಜತೆಗಿನ ಬಾಂಧ್ಯವದ ಬಗ್ಗೆ ತಮ್ಮ ಮಾತನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊವನ್ನು 7 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.
https://twitter.com/SaintsCrossing/status/1281569620223094785?ref_src=twsrc%5Etfw%7Ctwcamp%5Etweetembed%7Ctwterm%5E1281569620223094785%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fdrank-all-your-beer-buddy-grandparents-hilarious-doorcam-message-for-grandson-wins-the-internet%2F620132