ನ್ಯೂಬರ್ಗ್: ಕಾರು ಕದ್ದು ಪರಾರಿಯಾಗುತ್ತಿದ್ದ ಕಳ್ಳ ತಾನು ಸಿಕ್ಕಿ ಬೀಳುವ ಜತೆಗೆ ಇನ್ನೊಬ್ಬ ಕಾರು ಕಳ್ಳಿಯನ್ನೂ ಪೊಲೀಸರಿಗೆ ಹಿಡಿದುಕೊಟ್ಟ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಕಳ್ಳತನವಾದ ಕಾರಿನಲ್ಲಿ ಪರಾರಿಯಾಗುತ್ತಿದ್ದ 27 ವರ್ಷದ ರ್ಯಾಂಡಿ ಲೀ ಎಂಬಾತನನ್ನು ಒರೆಗಾನ್ ನ ನ್ಯೂ ಬರ್ಗ್ ನಗರದ ಪೊಲೀಸರು ಡೌನ್ ಟೌನ್ ನಿಂದ ಬೆನ್ನು ಹತ್ತಿದ್ದರು.
ಪೊಲೀಸರಿಂದ ಬಚಾವಾಗಲು ಆತ ಅತೀ ವೇಗದಲ್ಲಿ ಕಾರು ಓಡಿಸುತ್ತಿದ್ದ. ಆದರೆ, ನ್ಯೂ ಬರ್ಗ್ ನಿಂದ ಡೌನ್ ಟೌನ್ ತಲುಪಿದಾಗ ಕಳ್ಳ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ. ಅಪಘಾತವಾದ ನಂತರ ಲೀ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಅಪಘಾತಕ್ಕೊಳಗಾದ ಇನ್ನೊಂದು ಕಾರನ್ನು 25 ವರ್ಷದ ಕ್ರಿಶ್ಚಿನ್ ನಿಕೊಲೆ ಬೆಂಗ್ಯೂ ನಶೆಯಲ್ಲಿ ಓಡಿಸುತ್ತಿರುತ್ತಾಳೆ. ಆಕೆಯನ್ನು ವಿಚಾರಣೆ ನಡೆಸಿದಾಗ ಇನ್ನೊಂದು ಅಚ್ಚರಿಯ ಸಂಗತಿ ತಿಳಿದು ಬರುತ್ತದೆ. ಮೂರು ವಾರಗಳ ಹಿಂದೆ ಆ ಕಾರೂ ಸಹ ಕಳ್ಳತನವಾಗಿತ್ತು ಎಂಬುದು ಬೆಳಕಿಗೆ ಬಂದಿದೆ ಎಂದು ನ್ಯೂಬರ್ಗ್ ಡುಂಡೀ ಪೊಲೀಸ್ ಇಲಾಖೆ ಇದನ್ನು ಫೇಸ್ ಬುಕ್ ನಲ್ಲಿ ಬರೆದುಕೊಂಡಿದೆ. ಇಬ್ಬರನ್ನೂ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
https://www.facebook.com/NewbergDundeePD/posts/3009499075823891