ಕೊರೊನಾ ವೈರಸ್ನಿಂದ ರಕ್ಷಣೆಗಾಗಿ N95 ಮಾಸ್ಕ್ ಧಾರಣೆ ಮಾಡುವುದನ್ನು ಕಿರಿಕಿರಿ ಎಂದುಕೊಳ್ಳುತ್ತಿರುವ ಮಂದಿಗೆ ಮಾಸ್ಕ್ ಧರಿಸುವಂತೆ ಮಾಡಲು ಜಪಾನಿ ಸಂಶೋಧಕರು ಒಂದು ಅದ್ಧೂರಿ ಐಡಿಯಾದೊಂದಿಗೆ ಮುಂದೆ ಬಂದಿದ್ದಾರೆ.
ಮಾಸ್ಕ್ ಇರುವ ಕಾರಣದಿಂದ ಸರಿಯಾಗಿ ಸಂವಹನ ಮಾಡಲು ಆಗದೇ ಇರುವ ಮಂದಿಗೆ, ಜಪಾನೀಸ್ ಇಂಜಿನಿಯರ್ಗಳು ಈ ವಿನೂತನ ಮಾಸ್ಕ್ ತಂದಿದ್ದು, ಇದನ್ನು ಧರಿಸಿ ನೀವು 8 ವಿವಿಧ ಭಾಷೆಗಳಲ್ಲಿ ಮಾತನಾಡಬಹುದಾಗಿದೆ. ಸಿಲಿಕಾನ್ ಹಾಗೂ ಬಿಳಿ ಪ್ಲಾಸ್ಟಿಕ್ನಿಂದ ಮಾಡಲಾಗಿರುವ ಈ C-ಮಾಸ್ಕ್ನಲ್ಲಿ ಮೈಕ್ರೋಫೋನ್ ಇದ್ದು, ಅದನ್ನು ಬಾಯಿಗೆ ಧರಿಸಿ, ಅದನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್ಫೋನ್ ಗೆ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.
ಈ ಮೂಲಕ ಎಂಟು ವಿವಿಧ ಭಾಷೆಗಳಲ್ಲಿ ನೀವು ಮಾತನಾಡುವುದನ್ನು ಭಾಷಾಂತರಿಸಲಿದೆ ಈ C-ಮಾಸ್ಕ್. ಸದ್ಯಕ್ಕೆ ಇದರಲ್ಲಿ ಭಾರತೀಯ ಭಾಷೆಗಳ ಆಯ್ಕೆ ಇಲ್ಲ. ನಿಮಗೇನಾದರೂ ಈ ಮಾಸ್ಕ್ ಬೇಕಾದಲ್ಲಿ ಬೇಡಿಕೆ ಮೇಲೆ ಭಾರತೀಯ ಭಾಷೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ಇರುವ ಮಾಮೂಲಿ ಮಾಸ್ಕ್ ಮೇಲೆ ಈ C-ಮಾಸ್ಕ್ ಅನ್ನು ಧರಿಸಬಹುದಾಗಿದೆ.