ಬಹಳ ಪ್ರಾಮಾಣಿಕತೆಯಿಂದ ತಾನು ಸರ್ವ್ ಮಾಡುವ ಡಿಶ್‌ಗಳು ಹೇಗಿರುತ್ತವೆ ಎಂದು ಹೇಳಿಕೊಂಡಿರುವ ಚೀನೀ ರೆಸ್ಟೋರಂಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.
ಮಾಂಟ್ರಿಯಲ್‌ನ ಆಂಟ್ ಡಾಯ್ ರೆಸ್ಟೋರೆಂಟ್ ತನ್ನ ಮೆನುವಿನಲ್ಲಿನ ಖಾದ್ಯಗಳ ಬಗ್ಗೆ ಸ್ವಯಂ ಆಗಿ ಕ್ರಿಟಿಕಲ್ ರಿವ್ಯೂಗಳನ್ನು ಬರೆದುಕೊಂಡಿದೆ.
ಟ್ವಿಟರ್ ಬಳಕೆದಾರರಾದ ಕಿಮ್ ಬೆಲೇರ್ ಈ ಬಗ್ಗೆ ಬರೆದುಕೊಂಡಿದ್ದು, ಆಂಟ್ ಡಾಯಿ ತಮ್ಮ ಮೆಚ್ಚಿನ ಚೈನೀಸ್ ರೆಸ್ಟೋರೆಂಟ್ ಎಂದು ತಿಳಿಸಿದ್ದು, ಇದಕ್ಕೆ ಕಾರಣ ಅಲ್ಲಿ ಸಿಗುವ ಆಹಾರ ಹಾಗೂ ಅವರ ಪ್ರಾಮಾಣಿಕ ಮೆನು ಎಂದಿದ್ದಾರೆ.
ಖಾದ್ಯವೊಂದರ ಬಗ್ಗೆ ಮೆನುವಿನಲ್ಲಿ ವಿವರಣೆ ಬರೆದಿರುವ ರೆಸ್ಟೋರೆಂಟ್ ಮಾಲೀಕ, “ಇದು ಕರ‍್ರಿ ಫ್ಲೇವರ್ ಇದ್ದು, ಬಹಳ ರುಚಿಯಾಗಿರುತ್ತದೆ ಎಂದು ನಿರೀಕ್ಷಿಸಬೇಡಿ. ಆದರೆ ಇದು ಸೇಫ್ ಆಯ್ಕೆಯಾಗಿದ್ದು, ನಿಮ್ಮನ್ನು ಸಂತಸಗೊಳಿಸಬಲ್ಲದು” ಎಂದು ಬರೆದಿದ್ದಾರೆ. ಇದೇ ರೀತಿ ಮೆನುವಿನಲ್ಲಿರುವ ಪ್ರತಿಯೊಂದು ಖಾದ್ಯಕ್ಕೂ ಪ್ರಾಮಾಣಿಕ ರಿವ್ಯೂ ಬರೆಯಲಾಗಿದೆ.