ಕೊರೋನಾ ವೈರಸ್ ವಿರುದ್ಧ ನಿರಂತರ ಹೋರಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸ್ಪೇನ್‌ನ ಎಲ್ ಬರ‍್ರಿಟೋ ಫೆಲಿಝ್ ಎಂಬ ಸಂಸ್ಥೆಯೊಂದು ಊರಿನಲ್ಲಿ ವಿಶೇಷ ಥೆರಪಿ ಮೂಲಕ ನೈತಿಕ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ.
ಕೆಲಸದೊತ್ತಡ, ಡಿಪ್ರೆಶ್ಶನ್ ಹಾಗೂ ಇನ್ನಿತರ ಮಾನಸಿಕ ಸಮಸ್ಯೆಗಳಿಗೆ ಕತ್ತೆಮರಿಗಳೊಂದಿಗೆ ಸಮಯ ಕಳೆಯುವ ಈ ವಿಶೇಷ ಥೆರಪಿಯನ್ನು ಆರೋಗ್ಯ ಕಾರ್ಯಕರ್ತರಿಗೆ ಕೊಡಮಾಡಲಾಗುತ್ತಿದೆ. ಇಂಥ ಥೆರಪಿಗಳು ಸಾಮಾನ್ಯವಾಗಿ ಕುದುರೆಗಳನ್ನು ಒಳಗೊಂಡಿರುತ್ತವೆ. ಆದರೆ ಕತ್ತೆ ಮರಿಗಳು ಸಹ ತಮ್ಮ ಮೃದುತನದಿಂದ ಇಂಥ ಮಾನಸಿಕ ಸಮಸ್ಯೆಗಳಿಗೆ ಒಳ್ಳೆಯ ಥೆರಪಿ ಕೊಡಬಲ್ಲವು ಎಂದು ತಜ್ಞರು ಹೇಳುತ್ತಾರೆ.
’ಡಾಕ್ಟರ್ ಡಾಂಕಿ’ ಹೆಸರಿನ ಈ ಪ್ರಾಜೆಕ್ಟ್ ಕಳೆದ ಜೂನ್‌ನಲ್ಲಿ ಆರಂಭಗೊಂಡಿದ್ದು, ಕೊರೋನಾ ವಿರುದ್ಧ ಹೋರಾಡುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಬಿಡುವು ಕೊಡಲೆಂದು ಥೆರಪಿ ನಡೆಸಲಾಗುತ್ತಿದೆ. ದಕ್ಷಿಣ ಸ್ಪೇನ್‌ನಲ್ಲಿರುವ ಈ ಸಂಸ್ಥೆಯ ಬಳಿ 23 ಕತ್ತೆಗಳು ಇದಕ್ಕೆಂದೇ ಇವೆ.