
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದೇಶಕ್ಕೆ ಕೆಲಸ ಅರಸಿ ಬರುವ ವಲಸಿಗರಿಗೆ ನೀಡುವ ಎಚ್ 1ಬಿ ವೀಸಾವನ್ನು ತಾತ್ಕಾಲಿಕ ರದ್ದುಗೊಳಿಸಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ.
ಇದೀಗ ಕೆಲಸ ಅರಸಿ ಅಮೆರಿಕಾಕ್ಕೆ ಬರುವ ವಿದೇಶಿಗರಿಗೆ ಇದರಿಂದ ಭಾರಿ ಸಮಸ್ಯೆಯಾಗಲಿದೆ. ಆದ್ದರಿಂದ ಇದೀಗ ಟ್ರಂಪ್ ವಿರುದ್ಧ ಅನೇಕರು ತಿರುಗಿ ಬಿದ್ದಿದ್ದಾರೆ.
ಇದರೊಂದಿಗೆ ಮೂಲತಃ ಅಮೆರಿಕಾದವರಲ್ಲದ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಅವರೂ ಸಹ ಇದೇ ಎಚ್1ಬಿ ವೀಸಾದಲ್ಲಿ ಅಮೆರಿಕಾಕ್ಕೆ ಆಗಮಿಸಿದ್ದು ಎಂದು ಸಾಮಾಜಿಕ ಜಾಲತಾಣದಲ್ಲಿ ನೆನಪಿಸಿದ್ದಾರೆ.
ಮೂಲತ ಸ್ಲೊವೆಲಿಯನ್ ದವರಾದ ಮೆಲನಿಯಾ, 96ರಲ್ಲಿ ಪ್ರವಾಸಿ ವೀಸಾದ ಮೇಲೆ ಅಮೆರಿಕಾಕ್ಕೆ ಆಗಮಿಸಿದ್ದರು. 2001ರಲ್ಲಿ ಇಬಿ1 ವೀಸಾ ಪಡೆಯುವಲ್ಲಿ ಸಫಲರಾಗಿ, 2006ರಲ್ಲಿ ಅಮೆರಿಕದ ಪೌರತ್ವ ಪಡೆದರು. ಇದೀಗ ಆಕೆಯ ಪೋಷಕರಿಗೆ ಪೌರತ್ವ ಕೊಡಿಸಲು ಸಿದ್ಧತೆ ನಡೆಸಿದ್ದಾರೆ
ಈ ಎಲ್ಲವನ್ನು ಟ್ರಂಪ್ ಅವರಿಗೆ ನೆನಪಿಸಿರುವ ನೆಟ್ಟಿಗರು, ಒಂದು ವೇಳೆ ಎಚ್1ಬಿ ವೀಸಾ ಇರದಿದ್ದರೆ ನಿಮಗೆ ನಿಮ್ಮ ಪತ್ನಿಯ ಪರಿಚಯವೇ ಆಗುತ್ತಿರಲಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಇನ್ನು ಕೆಲವರು ಎಚ್1ಬಿ ವೀಸಾದ ಮೇಲೆ ಆಗಮಿಸಿದ ಮೆಲನಿಯಾ ಟ್ರಂಪ್ ಹಾಗೂ ಆಕೆಯ ಪೋಷಕರನ್ನು ವಾಪಸು ತಮ್ಮ ದೇಶಕ್ಕೆ ಕಳುಹಿಸುವಿರೇ ಎಂದು ಪ್ರಶ್ನಿಸಿದ್ದಾರೆ.