2020ರ ಚುನಾವಣೆಯಲ್ಲಿ ಜೋ ಬಿಡೆನ್ ವಿಜಯಿಯಾಗಿದ್ದಾರೆಂದು ಘೋಷಿಸುವ ಸಂದರ್ಭದಲ್ಲಿ ಟ್ರಂಪ್, ವರ್ಜಿನಿಯಾದ ಸ್ಟರ್ಲಿಂಗ್ನಲ್ಲಿ ಗಾಲ್ಫ್ ಆಟ ಆಡುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ವು.
ಕಳೆದ ಅನೇಕ ವರ್ಷಗಳಿಂದ ಗಾಲ್ಫ್ ಪ್ರಿಯರಾಗಿರುವ ಡೊನಾಲ್ಡ್ ಟ್ರಂಪ್ ಫಲಿತಾಂಶದ ಒತ್ತಡವನ್ನ ಮರೆಯೋಕೆ ಗಾಲ್ಫ್ ಆಡಿದ್ದಿರಬಹುದು ಅಂತಾ ಅನೇಕರು ಅಂದಾಜಿಸಿದ್ದಾರೆ. ಆದರೆ ಲಂಡನ್ನ ಮೇಡಂ ಟುಸ್ಸಾಡ್ಸ್ ಇದಕ್ಕೆ ಬೇರೆಯ ರೂಪವನ್ನೇ ಕೊಟ್ಟಿದೆ.
ಮೇಣದ ವಸ್ತು ಸಂಗ್ರಹಾಲಯದಲ್ಲಿ ಡೋನಾಲ್ಡ್ ಟ್ರಂಪ್ರ ಮೇಣದ ಪ್ರತಿಮೆಯ ಉಡುಪನ್ನ ಬದಲಾಯಿಸಲಾಗಿದೆ. ಇಷ್ಟು ದಿನ ನೀಲಿಬಣ್ಣದ ಸೂಟ್ ಧರಿಸಿದ್ದ ಈ ಪ್ರತಿಮೆಗೆ ಇದೀಗ ಗಾಲ್ಫ್ ಬಟ್ಟೆಯನ್ನ ಹಾಕಲಾಗಿದೆ.