ಚೀನಾದ ಪ್ರಯೋಗಾಲಯವೊಂದರಿಂದ ಕೋವಿಡ್-19 ವೈರಸ್ ಉಗಮಿಸಿತೆಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡೇ ಬರುತ್ತಿದ್ದಾರೆ. ವೈರಾಣುವಿನ ವುಹಾನ್ ಸಂಬಂಧ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವಾಗ ಟ್ರಂಪ್ ಸಹ ಮತ್ತೆ ಸದ್ದು ಮಾಡುತ್ತಿದ್ದಾರೆ.
“ನನ್ನ ಈ ಥಿಯರಿ ಸ್ಮಾರ್ಟ್ ಜನರಿಗೆ ಸರಿಯೆನಿಸಿದೆ. ನನಗೆ ಇದರಲ್ಲಿ ಯಾವುದೇ ಅನುಮಾನವಿರಲಿಲ್ಲ” ಎಂದು ಟ್ರಂಪ್ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ಸತತ 16 ಗಂಟೆ ನೀರಿನಲ್ಲಿದ್ದ ಮಹಿಳೆಗೆ ಕಾಡಿದೆ ಈ ಸಮಸ್ಯೆ
ತಾವು ಅಮೆರಿಕ ಅಧ್ಯಕ್ಷರಾಗಿದ್ದ ವೇಳೆ ಕೋವಿಡ್-19 ಸೋಂಕಿನ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಟ್ರಂಪ್ ಭಾರೀ ಟೀಕೆಗೆ ಗ್ರಾಸವಾಗಿದ್ದರು. ವೈರಸ್ ಸಂಬಂಧ ಚೀನಾದ ಹೆಸರನ್ನು ಉಚ್ಛರಿಸಿದ ಕಾರಣ, ಜೋ ಬಿಡೆನ್ ಸಹಿತ ಬೀಜಿಂಗ್ ಕೃಪಾಪೋಷಿತರನೇಕರು ತಮ್ಮನ್ನು ಕಟುವಾಗಿ ಟೀಕಿಸಿದ್ದರು ಎಂದು ಟ್ರಂಪ್ ಹೇಳಿದ್ದಾರೆ.
ಜಿಂದಾಲ್ ಗೆ 3667 ಎಕರೆ ಜಮೀನು ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ, ವಾಪಸ್ ಗೆ ಹೆಚ್ಚಿದ ಒತ್ತಡ
ಕೋವಿಡ್ ಮೂಲದ ಬಗ್ಗೆ ಇತ್ತೀಚಿನ ವರದಿಗಳು ಬಂದ ಬಳಿಕ, ಅಮೆರಿಕದ ಮಾನವ ಹಾಗೂ ಮಾನವೀಯ ಸೇವೆಗಳ ಕಾರ್ಯದರ್ಶಿ ಕ್ಸೇವಿಯರ್ ಬೆಕೆರ‍್ರಾ ಅವರು ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.
ಕಳೆದ ವರ್ಷ ತಾವು ಭಾಗವಹಿಸಿದ ಮಾಧ್ಯಮಗೋಷ್ಠಿಯಲ್ಲೆಲ್ಲಾ ಕೋವಿಡ್-19 ಅನ್ನು ಚೈನೀಸ್ ವೈರಸ್ ಎನ್ನುತ್ತಲೇ ಬಂದಿದ್ದ ಟ್ರಂಪ್, ಈಗ ಎಲ್ಲರೂ ತಮ್ಮ ಮಾತನ್ನು ಸರಿ ಎನ್ನುತ್ತಾರೆ ಎಂದಿದ್ದಾರೆ.