alex Certify ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸ್ತಿ ಮೌಲ್ಯದಲ್ಲಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಅಧ್ಯಕ್ಷ ಟ್ರಂಪ್ ಆಸ್ತಿ ಮೌಲ್ಯದಲ್ಲಿ ಇಳಿಕೆ

First slide

ಫೋರ್ಬ್ಸ್ ನಿಯತಕಾಲಿಕವು ಶ್ರೀಮಂತ ಅಮೆರಿಕನ್ನರ ಪಟ್ಟಿ ಬಿಡುಗಡೆ ಮಾಡಿದೆ. ಇದರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಟ್ಟು ಸಂಪತ್ತಿನಲ್ಲಿ ಇಳಿಕೆ ಕಂಡು ಬಂದಿದೆ.

ಹಿಂದಿನ ಒಂದು ವರ್ಷದಲ್ಲಿ 60 ಕೋಟಿ ಅಮೆರಿಕನ್ ಡಾಲರ್ ಸಂಪತ್ತು ಕಡಿಮೆಯಾಗಿದೆ. ಟ್ರಂಪ್ ಒಟ್ಟು ಆಸ್ತಿ  2.5 ಅರಬ್ ಡಾಲರ್ ಆಗಿದೆ.

ಪತ್ರಿಕೆ ಬಿಡುಗಡೆ ಮಾಡಿದ 400 ಅತ್ಯಂತ ಶ್ರೀಮಂತ ಅಮೆರಿಕನ್ನರ ಪಟ್ಟಿಯಲ್ಲಿ ಟ್ರಂಪ್ 339 ನೇ ಸ್ಥಾನದಲ್ಲಿದ್ದಾರೆ. ಅವರು ಕಳೆದ ಒಂದು ವರ್ಷದಲ್ಲಿ 64 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಫೋರ್ಬ್ಸ್ ಪ್ರಕಾರ, ನ್ಯೂಯಾರ್ಕ್ ನಲ್ಲಿ ಟ್ರಂಪ್ ಆಸ್ತಿ 32.6 ಕೋಟಿ ಡಾಲರ್ ಕುಸಿದಿದೆ. ನ್ಯೂಯಾರ್ಕ್ ಅಲ್ಲದೆ ಬೇರೆ ಕಡೆಯಿರುವ ಸಂಪತ್ತಿನಲ್ಲಿ 12.4 ಕೋಟಿ ಡಾಲರ್ ಕುಸಿತ ಕಂಡು ಬಂದಿದೆ.

ಟ್ರಂಪ್ ಹೆಸರಿನಲ್ಲಿರುವ ಗಾಲ್ಫ್ ಕೋರ್ಟ್ ಹಾಗೂ ಕ್ಲಬ್ ನಲ್ಲಿ ಅಂದಾಜು 13.7 ಕೋಟಿ ಅಮೆರಿಕನ್ ಡಾಲರ್ ಕಳೆದುಕೊಂಡಿದ್ದಾರೆ. ಆದ್ರೆ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಅವರ ಮಾರ್-ಎ-ಲಾಗೊ ಕ್ಲಬ್ ಆಸ್ತಿಯಲ್ಲಿ 10 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳ ಕಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...