ಸಾಕು ನಾಯಿಗಳನ್ನು ಪ್ರತಿನಿತ್ಯ ಕನಿಷ್ಠ ಎರಡು ಬಾರಿ ವಾಕಿಂಗ್‌ಗೆ ಕರೆದುಕೊಂಡು ಹೋಗಬೇಕೆಂದು ಜರ್ಮನಿ ಸರ್ಕಾರ ಹೊಸ ಕಾನೂನು ತರಲು ಹೊರಟಿದೆ. ಜರ್ಮನಿಯಲ್ಲಿ ಸದ್ಯ 94 ಲಕ್ಷ ಶ್ವಾನಗಳಿವೆ.
ಕೃಷಿ ಸಚಿವೆ ಜೂಲಿಯಾ ಕ್ಲೋಕ್ನರ್ ಈ ಕುರಿತು ಘೋಷಣೆ ಮಾಡಿದ್ದು, ನಾಯಿಗಳಿಗೆ ಪ್ರತಿನಿತ್ಯ ಕನಿಷ್ಠ ಎರಡು ಬಾರಿಯಾದರೂ ಉದ್ಯಾನದಲ್ಲಿ ವಾಕಿಂಗ್ ಅಥವಾ ಜಾಗಿಂಗ್ ಮಾಡಿಸಬೇಕೆಂಬ ಕಾನೂನು ತರುವುದಾಗಿ ಹೇಳಿದ್ದಾರೆ.
ಒಂದು ವೇಳೆ ಈ ಕಾನೂನನ್ನು ಜರ್ಮನಿಯ ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ, ಅಲ್ಲಿನ 16 ಪ್ರಾಂತೀಯ ಸರ್ಕಾರಗಳು ಅದನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ.