
ನಾಯಿಗಳು ತಮ್ಮ ಇಡೀ ಜೀವನದುದ್ದಕ್ಕೂ ತಮ್ಮನ್ನು ಸಾಕಿದವರಿಗೆ ಭಾವನಾತ್ಮಕವಾಗಿ ಬಾಂಡಿಂಗ್ ಬೆಳೆಸಿಕೊಂಡುಬಿಡುತ್ತವೆ. ಈ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ.
ಇಂಥ ಮತ್ತೊಂದು ವಿಡಿಯೋದಲ್ಲಿ ನಾಯಿಯೊಂದು ತನ್ನ ಮಾಲೀಕನ ಶೂಗಳೊಂದಿಗೆ ಮಲಗಿರುವುದನ್ನು CC TV ಕ್ಯಾಮೆರಾ ಒಂದರಲ್ಲಿ ಸೆರೆಯಾಗಿದೆ. ತನ್ನ ಮಾಲೀಕ ಕೆಲಸಕ್ಕೆಂದು ಮನೆಯಿಂದ ಹೊರಗೆ ಇದ್ದ ವೇಳೆ ನಾಯಿ ಹೀಗೆ ಮಾಡಿದೆ.
ನಾಯಿಯ ಈ ವಿಡಿಯೋ ವೈರಲ್ ಆಗಿದ್ದು, ಅದರ ಮಾಲೀಕರು ಇನ್ನೆಂದೂ ಅದನ್ನು ಹಾಗೆ ಒಂಟಿಯಾಗಿ ಬಿಡುವುದಿಲ್ಲ ಎಂದಿದ್ದಾರೆ. ಈ ವಿಡಿಯೋ ಕಂಡ ನೆಟ್ಟಿಗರು ಬಹಳ ಭಾವುಕರಾಗಿದ್ದಾರೆ.