ಪ್ರಾಣಿಗಳನ್ನು ದತ್ತು ಪಡೆದು ಸಾಕಲು ಸಾಮಾನ್ಯವಾಗಿ ಶೆಲ್ಟರ್ ಹೋಂಗಳಿಗೆ ಪ್ರಾಣಿಪ್ರಿಯರು ಭೇಟಿ ಕೊಡುತ್ತಾರೆ. ಆದರೆ ದತ್ತು ತಂದ ನಾಯಿಯೊಂದನ್ನು ಮರಳಿ ಶೆಲ್ಟರ್ ಹೋಂಗೆ ಕಳುಹಿಸುವ ಎಷ್ಟು ನಿದರ್ಶನಗಳನ್ನು ನಾವು ನೋಡಿದ್ದೇವೆ…?
ದಕ್ಷಿಣ ಲಂಡನ್‌ನಲ್ಲಿರುವ ನಾಯಿಗಳು ಹಾಗೂ ಬೆಕ್ಕುಗಳ ಬ್ಯಾಟರ್‌ಸೀ ಹೋಂನ ಸಿಇಓ ಹಾಗೂ ಚಾರಿಟಿ ವರ್ಕರ್ ಕ್ಲೇಯ್ರ್ ಹಾರ್ಟನ್ ಮಾಧ್ಯಮವೊಂದರ ಸಂದರ್ಶನದ ವೇಳೆ ಈ ಫನ್ನಿ ಘಟನೆಯ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ.
ಬಡ ವ್ಯಾಪಾರಿ ನಸೀಬು ಬದಲಾಗಲು ಕಾರಣವಾಯ್ತು ಒಂದು ʼಟ್ವೀಟ್ʼ
ದತ್ತು ಪಡೆದುಕೊಂಡ ನಾಯಿಗಳ ಪೈಕಿ 10%ನಷ್ಟನ್ನು ಮಾಲೀಕರು ಹಿಂದಿರುಗಿಸುತ್ತಾರೆ ಎಂದ ಕ್ಲೇಯ್ರ್, ಮಾಲೀಕರು ಪ್ರಾಣಿಗಳನ್ನು ಹಿಂದಿರುಗಿಸಲು ಕೊಡುವ ಫನ್ನಿ ಕಾರಣಗಳ ಬಗ್ಗೆಯೂ ಹೇಳಿದ್ದಾರೆ.
ಇಂಥ ಮಾಲೀಕರೊಬ್ಬರು ತಮ್ಮ ಮನೆಯ ಸೋಫಾ ಬಣ್ಣಕ್ಕೆ ನಾಯಿ ಮ್ಯಾಚ್ ಆಗುತ್ತಿಲ್ಲವೆಂಬ ಸಲ್ಲದ ಕಾರಣ ಕೊಟ್ಟು ನಾಯಿಯನ್ನು ಹಿಂದಿರುಗಿಸಿದ ವಿಚಾರವನ್ನು ಹಂಚಿಕೊಂಡಿದ್ದಾರೆ ಕ್ಲೇಯ್ರ್. ಅದೇ ನಾಯಿಯನ್ನು ಮತ್ತೊಂದು ಕುಟುಂಬ ದತ್ತು ಪಡೆದಿದ್ದು, ಇನ್ನಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಕ್ಲೇಯ್ರ್ ತಿಳಿಸಿದ್ದಾರೆ.