ಕೆನಡಾದ ಒಂಟಾರಿಯೋದಲ್ಲಿ ಕಾರೊಂದು ಕಂದಕಕ್ಕೆ ಉರುಳಿದ್ದು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ ಪೊಲೀಸರು ಈ ಅಪಘಾತಕ್ಕೆ ಕಾರಣ ಶ್ವಾನ ಎಂದು ಕಂಡು ಹಿಡಿದಿದ್ದಾರೆ.
ಕಾರಿನೊಳಗೆ ಏಕಾಂಗಿಯಾಗಿ ಕುಳಿತಿದ್ದ ಸಾಕು ಶ್ವಾನ ಏನೋ ಮಾಡಲು ಹೋಗಿ ಕಾರಿನ ಗಿಯರ್ ಶಿಫ್ಟ್ ಮಾಡಿದೆ. ಚಾಲಕ ಬಂದು ಗಾಡಿಯನ್ನ ಚಲಾವಣೆ ಮಾಡುತ್ತಿದ್ದಂತೆ ಕಾರು ಹೋಗಿ ಕಂದಕಕ್ಕೆ ಹಾರಿದೆ.
ಕಾರು ಚಾಲಕ ಅಪಘಾತದಿಂದ ಪಾರಾಗಲು ಮಾಡಿದ ಪ್ರಯತ್ನವೆಲ್ಲವೂ ವಿಫಲಾಗಿದೆ. ಅಪಘಾತದಲ್ಲಿ ಸಣ್ಣ ಪುಟ್ಟ ಗಾಯ ಸಂಭವಿಸಿದೆ.
ಈ ಸಂಬಂಧ ಒಂಟಾರಿಯೋ ಪೊಲೀಸರು ಫೇಸ್ಬುಕ್ ಮಾಹಿತಿ ಹಂಚಿಕೊಂಡಿದ್ದು #BadDog ಎಂಬ ಹ್ಯಾಶ್‌ಟ್ಯಾಗ್ ಬಳಕೆ ಮಾಡಿದ್ದಾರೆ.