2020ರ ವರ್ಷದಲ್ಲಿ ’ಹೀಗೆಲ್ಲಾ ಆಗುತ್ತಾ?’ ಎಂದು ಅಚ್ಚರಿ ಪಡುವಂಥ ಸಾಕಷ್ಟು ಘಟನೆಗಳು ಜರುಗುತ್ತಲೇ ಬಂದಿವೆ.
ಲಾಸ್ ಏಂಜಲಿಸ್ನ ಆಗಸದಲ್ಲಿ 3000 ಅಡಿ ಎತ್ತರದಲ್ಲಿ ಅನಾಮಿಕನೊಬ್ಬ ಜೆಟ್ಪ್ಯಾಕ್ ಸೂಟ್ನಲ್ಲಿ ಹಾರುತ್ತಿದ್ದ ಎಂದು ಅಮೆರಿಕನ್ ಏರ್ಲೈನ್ಸ್ ವಿಮಾನದ ಸಿಬ್ಬಂದಿ ವರದಿ ಮಾಡಿದ್ದಾರೆ.
ತಮ್ಮ ವಿಮಾನದಿಂದ ಕೇವಲ 300 ಅಡಿ ದೂರದಲ್ಲಿ ಈ ವ್ಯಕ್ತಿ ಹಾರಾಡುತ್ತಿದ್ದ ಎಂದು ಪೈಲಟ್ಗಳು ತಿಳಿಸಿದ್ದಾರೆ.
ಆಗಸ್ಟ್ 30ರ ಬೆಳಗಿನ ಜಾವ 6:30ರ ವೇಳೆಗೆ, ಲಾಸ್ ಏಂಜಲಿಸ್ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಈ ಜೆಟ್ಪ್ಯಾಕ್ ಧಾರಿಯನ್ನು ಕಂಡಿರುವುದಾಗಿ ವರದಿಗಳು ತಿಳಿಸುತ್ತವೆ. ಈ ವ್ಯಕ್ತಿಯನ್ನು ಕಂಡ ಕೂಡಲೇ ಪೈಲಟ್ಗಳು ವಿಮಾನ ನಿಲ್ದಾಣದ ಸಂಚಾರ ನಿಯಂತ್ರಣ ಘಟಕಕ್ಕೆ ಸಂದೇಶ ರವಾನೆ ಮಾಡಿದ್ದರು. ಕೂಡಲೇ ಆತ ಕಂಡ ಜಾಗದ ಸುತ್ತಮುತ್ತ ಫ್ಲೈಟ್ ಹಾರಾಟ ಕೆಲ ಕಾಲ ಸ್ಥಗಿತಗೊಂಡಿತ್ತು.
ಇದೀಗ ಇದೇ ವ್ಯಕ್ತಿ ಮತ್ತೊಮ್ಮೆ ಲಾಸ್ ಏಂಜಲಿಸ್ ಆಗಸದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 21ರಂದು 3000 ಅಡಿ ಎತ್ತರದಲ್ಲಿ ಕಂಡು ಬಂದ ಈತನನ್ನು ಫ್ಲೈಟ್ ಇನ್ಸ್ಟ್ರಕ್ಟರ್ ಒಬ್ಬರು ವಿಡಿಯೋ ಮಾಡಿದ್ದರು.
https://www.instagram.com/p/CJHqWoeBiLr/?utm_source=ig_web_copy_link