ಈ ಸರ್ಜಿಕಲ್ ಪ್ರಕ್ರಿಯೆಗಳು ಎಂದರೆ ದುರ್ಬಲ ಹೃದಯಿಗಳಿಗೆ ಬಹಳ ಸಂಕಟವಾಗುವಂಥ ವಿಚಾರ. ಆದಕ್ಕೇ ನೋಡಿ ವೈದ್ಯರ ಗುಂಡಿಗೆಯನ್ನು ಮೆಚ್ಚಲೇ ಬೇಕು ಅನ್ನೋದು.
ಇತ್ತೀಚೆಗೆ ಆಗ್ನೇಯ ಚೀನಾದ 11 ವರ್ಷದ ಬಾಲಕನೊಬ್ಬನ ಬ್ಲಾಡರ್ ನಲ್ಲಿ ಸೇರಿಕೊಂಡಿದ್ದ 70 ಆಯಸ್ಕಾಂತೀಯ ಗುಂಡುಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಇಲ್ಲಿನ ಝೆಜಿಯಾಂಗ್ ವಿವಿಯ ವೈದ್ಯಕೀಯ ಸಂಸ್ಥೆಯಲ್ಲಿ ಎಕ್ಸ್-ರೇ ಮಾಡಿದ ವೈದ್ಯರು, ಬ್ಲಾಡರ್ ಚಿತ್ರಣ ಕಂಡು ಶಾಕ್ ಆಗಿಬಿಟ್ಟಿದ್ದರು.
ತಲಾ 5ಮಿಮೀ ವ್ಯಾಸದ 70 ಗುಂಡುಗಳನ್ನು ಎರಡು ಗಂಟೆಗಳ ಸತತ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ ವೈದ್ಯರು.