60 ವರ್ಷದ ವೃದ್ಧನ ಕಣ್ಣೊಳಗೆ ಇದ್ದ 20 ಜೀವಂತ ಹುಳುಗಳನ್ನ ತೆಗೆದು ಹಾಕುವಲ್ಲಿ ಚೀನಾದ ವೈದ್ಯರು ಯಶಸ್ವಿಯಾಗಿದ್ದಾರೆ. 60 ವರ್ಷದ ವೃದ್ಧ ವಾನ್ ಕಳೆದೆರಡು ತಿಂಗಳ ಹಿಂದೆ ಕಣ್ಣಿನಲ್ಲಿ ವಿಚಿತ್ರ ನೋವನ್ನ ಅನುಭವಿಸುತ್ತಿದ್ದರು.
ಆದರೆ ಮೊದಲು ಈ ನೋವಿನ ಬಗ್ಗೆ ನಿರ್ಲಕ್ಷ್ಯ ವಹಿಸಿದ ವಾನ್ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಯಾವಾಗ ಇದು ಸಹಿಸಲಸಾಧ್ಯವಾದ ನೋವನ್ನ ಕೊಡಲು ಆರಂಭಿಸಿತೋ ವೃದ್ಧ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ವಾನ್ರನ್ನ ಪರಿಶೀಲನೆಗೆ ಒಳಪಡಿಸಿದ ವೇಳೆ ವೈದ್ಯರಿಗೆ ಅವರ ಕಣ್ಣಲ್ಲಿ 20 ಜೀವಂತ ಹುಳುಗಳು ಆಶ್ರಯ ಪಡೆದಿರೋ ಅಂಶ ತಿಳಿದುಬಂದಿದೆ. ಇದಾದ ಬಳಿಕ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಲ್ಲಾ ಹುಳುಗಳನ್ನ ತೆಗೆದುಹಾಕಿದ್ದಾರೆ.
https://www.youtube.com/watch?v=oN5OMi-xJOI&feature=emb_logo