ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ಆಪರೇಷನ್ ಮಾಡುತ್ತಲೇ ವೈದ್ಯ ಜೂಮ್ ಟ್ರಾಫಿಕ್ ಟ್ರಯಲ್ನಲ್ಲಿ ಭಾಗಿಯಾಗಿದ್ದನ್ನ ಕಂಡು ಶಾಕ್ ಆಗಿದ್ದಾರೆ. ಸ್ಕಾಟ್ ಗ್ರೀನ್ ಎಂಬವರು ಸರ್ಜಿಕಲ್ ಉಡುಪು ಹಾಗೂ ಮಾಸ್ಕ್ಗಳನ್ನ ಧರಿಸಿಯೇ ಜೂಮ್ ಟ್ರಯಲ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ರೋಗಿಯೊಬ್ಬರಿಗೆ ಆಪರೇಷನ್ ಮಾಡುತ್ತಿದ್ದರು.
ಈ ವಿಚಿತ್ರ ಘಟನೆ ಸೆಕ್ರಾಮೆಂಟೋ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ನಡೆದಿದೆ. ಕ್ಲರ್ಕ್ ಗ್ರೀನ್ ಬಳಿ ಟ್ರಾಫಿಕ್ ಟ್ರಯಲ್ ಭಾಗಿಯಾಗುವಂತೆ ಕರೆದಿದ್ದಾರೆ. ಈ ವೇಳೆ ಗ್ರೀನ್, ಹಾ ಸರ್, ನಾನು ಈಗ ಆಪರೇಷನ್ ಥಿಯೇಟರ್ನಲ್ಲಿ ಇದ್ದೇನೆ. ನಾನು ಈಗ ಒಂದು ಆಪರೇಷನ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ನ್ಯಾಯಾಧೀಶ, ನಾನು ಆಪರೇಷನ್ ಥಿಯೇಟರ್ನಲ್ಲಿರುವ ಪ್ರತಿವಾದಿಯನ್ನ ನೋಡುತ್ತಿದ್ದೇನೆ. ಅವರು ಈಗ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ. ನಾನು ಗಮನಿಸಿದ ಈ ಅಂಶ ಸತ್ಯವೇ…? ನಿಮ್ಮನ್ನ ಗ್ರೀನ್ ಎಂದು ಕರೆಯಬೇಕೇ ಇಲ್ಲವೇ ಡಾ. ಗ್ರೀನ್ ಎನ್ನಬೇಕೆ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಗ್ರೀನ್, ನಾನು ರೋಗಿಯ ಬಗ್ಗೆ ಕಾಳಜಿ ವಹಿಸುತ್ತಿದ್ದೇನೆ. ಅಲ್ಲದೇ ನನ್ನೊಂದಿಗೆ ಬೇರೆ ವೈದ್ಯರೂ ಇದ್ದಾರೆ. ಹೀಗಾಗಿ ನಾನು ವಿಚಾರಣೆಗೆ ತಯಾರಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ನ್ಯಾಯಾಧೀಶ, ನನಗೇಕೋ ಇದು ಸರಿ ಎಂದೆನಿಸುತ್ತಿಲ್ಲ. ನಾನು ಇದಕ್ಕೆ ಇನ್ನೊಂದು ದಿನಾಂಕವನ್ನ ಪ್ರಕಟಿಸುತ್ತೇನೆ. ಆಗ ನೀವು ಸರಿಯಾಗಿ ವಿಚಾರಣೆಗೆ ಭಾಗಿಯಾಗಬಹುದು. ಈಗ ನೀವು ರೋಗಿಯ ಆರೋಗ್ಯದ ಕಡೆ ಗಮನ ಹರಿಸಬೇಕಿದೆ. ಆ ರೋಗಿಯ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಹೇಳಿದ್ರು.