ನಿಮ್ಮ ಮೊಬೈಲ್, ಪರ್ಸ್, ಹಣ ಅಥವಾ ಯಾವುದೇ ಬೆಲೆಬಾಳುವ ವಸ್ತು ಆಗಿರಲಿ. ಒಮ್ಮೆ ನೀವು ಅದನ್ನ ನದಿಯಲ್ಲಿ ಬೀಳಿಸಿಕೊಂಡ್ರಿ ಅಂದರೆ ಅದು ಮತ್ತೆ ವಾಪಾಸ್ ಸಿಗೋದು ತುಂಬಾನೇ ವಿರಳ.
ಕೆಲವೊಮ್ಮೆ ಮನುಷ್ಯರ ದುರಾದೃಷ್ಟದಿಂದಾಗಿ ತೀರಾ ಮಹತ್ವದ ವಸ್ತುಗಳು ಕೂಡ ನದಿಯಲ್ಲಿ ಕಳೆದುಹೋಗಿರುವ ಉದಾಹರಣೆಗಳೂ ಇವೆ.
ಪರಿಣಿತ ಈಜುಪಟು ಒಬ್ಬರು ಕ್ಯಾಲಿಫೋರ್ನಿಯಾದ ನದಿಯಲ್ಲಿ ಈಜುತ್ತಿದ್ದ ವೇಳೆ ಹೊಳೆಯುತ್ತಿದ್ದ ಚಿನ್ನದ ಉಂಗುರವೊಂದನ್ನ ಪತ್ತೆ ಮಾಡಿದ್ದಾರೆ.
ಉಂಗುರವೊಂದನ್ನ ಹುಡುಕಿದ್ದು ಮಾತ್ರವಲ್ಲದೇ ಅದರ ನಿಜವಾದ ಮಾಲೀಕರನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಈಜುಪಟು ಬ್ಲೈ ಈಗಾಗಲೇ ನೀರಿನಲ್ಲಿ ಸಾಕಷ್ಟು ಕಳೆದುಹೋದ ಬೆಲೆಬಾಳುವ ವಸ್ತುಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕನ್ ರಿವರ್ ಲಾಸ್ಟ್ & ಫೌಂಡ್ ಎಂಬ ಫೇಸ್ಬುಕ್ ಪೇಜ್ ಹೊಂದಿರುವ ಬ್ಲೈ ಇಲ್ಲಿ ತಾವು ಅನ್ವೇಷಿಸಿದ ವಸ್ತುಗಳನ್ನ ವಿಡಿಯೋಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ.
ಚಿನ್ನದ ಉಂಗುರವನ್ನ ಪತ್ತೆ ಮಾಡಿದ ಬಳಿಕ ಸೋಶಿಯಲ್ ಮೀಡಿಯಾದ ಸಹಾಯದಿಂದ ಅದರ ನಿಜವಾದ ಮಾಲೀಕ ಆದಮ್ ಪಾಪನಿಯನ್ನ ಹುಡುಕುವಲ್ಲಿ ಬ್ಲೈ ಯಶಸ್ವಿಯಾಗಿದ್ದಾರೆ.
ಸಿಬಿಎಸ್ ನ್ಯೂಸ್ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಪಾಪನಿ, ತಾವು ನದಿಯಲ್ಲಿ ಈಜುತ್ತಿದ್ದ ವೇಳೆ ಕೈಯಲ್ಲಿದ್ದ ಮದುವೆಯ ರಿಂಗ್ ಕಳೆದುಹೋಗಿತ್ತು ಎಂದು ಹೇಳಿದ್ದಾರೆ.
ಈ ಕ್ಷಣವನ್ನ ನಾನು ನನ್ನ ಜೀವನದ ಉದ್ದಕ್ಕೂ ನೆನಪಿನಲ್ಲಿ ಇಡುತ್ತೇನೆ. ಹಾಗೂ ಈ ಉಂಗುರವನ್ನ ಮುಂದೆ ನನ್ನ ಮೊಮ್ಮಕ್ಕಳಿಗೆ ನೀಡುವ ಮೂಲಕ ಈ ಕತೆಯನ್ನ ಹಂಚಿಕೊಳ್ಳುತ್ತೇನೆ ಎಂದು ಪಾಪಿನಿ ಹೇಳಿದ್ರು.
https://www.facebook.com/ARKayaker/videos/939866996799272/?t=0