ಡೆನ್ಮಾರ್ಕ್ ತನ್ನ ದೇಶದಲ್ಲಿ ಶೀಘ್ರದಲ್ಲೇ ಕೊರೊನಾ ವೈರಸ್ ಪಾಸ್ಪೋರ್ಟ್ನ್ನು ಜಾರಿಗೆ ತರೋದಾಗಿ ಹೇಳಿದೆ.
ತನ್ನ ದೇಶದ ಪ್ರಜೆಗಳಿಗೆ ಇತರೆ ದೇಶಕ್ಕೆ ಪ್ರಯಾಣ ಬೆಳೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಡೆನ್ಮಾರ್ಕ್ ಸರ್ಕಾರ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ಯುರೋಪಿಯನ್ ರಾಷ್ಟ್ರಗಳಲ್ಲಿ ಲಾಕ್ಡೌನ್ ಅವಧಿ ನಡೆಯುತ್ತಿದ್ದು ತುರ್ತು ಸೇವೆಗಳಲ್ಲದ ವಿಭಾಗಗಳಾದ ಬಾರ್, ರೆಸ್ಟೋರೆಂಟ್ಗಳಿಗೆ ಜನರ ಪ್ರವೇಶವನ್ನ ನಿರ್ಬಂಧಿಸಲಾಗಿದೆ. ಆದರೆ ಪಾರ್ಸೆಲ್ ಆದೇಶಗಳನ್ನ ಸ್ವೀಕರಿಸಲು ಅನುಮತಿ ನೀಡಲಾಗಿದೆ.
ಇನ್ನು ಕೊರೊನಾ ವೈರಸ್ ಪಾಸ್ಪೋರ್ಟ್ ಬಗ್ಗೆ ಮಾತನಾಡಿದ ಡೆನ್ಮಾರ್ಕ್ ಹಣಕಾಸು ಸಚಿವ ಮಾರ್ಟನ್ ಬೋಡ್ಸ್ಕೋವ್ ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಈ ಪಾಸ್ಪೋರ್ಟ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ರು.
ಖುಷಿ ಸುದ್ದಿ….! ವಾಹನ ಸ್ಕ್ರ್ಯಾಪ್ ಮಾಡಿದ್ರೆ ಸಿಗುತ್ತೆ ಡಬಲ್ ಸಬ್ಸಿಡಿ
ನೀವು ಕೋವಿಡ್ 19 ವಿರುದ್ಧ ಲಸಿಕೆ ಪಡೆದಿದ್ದೀರಿ ಎಂಬುದನ್ನ ಸಾಬೀತು ಪಡಿಸಲು ಈ ಕೊರೊನಾ ವೈರಸ್ ಪಾಸ್ಪೋರ್ಟ್ ಬಳಕೆಯಾಗುತ್ತದೆ. ಈ ಪಾಸ್ಪೋರ್ಟ್ನಲ್ಲಿ ವ್ಯಕ್ತಿಯು ಕೊರೊನಾ ನೆಗೆಟಿವ್ ವರದಿ ಹೊಂದಿದ್ದಾನೆ ಎಂಬ ವಿವರಗಳನ್ನೂ ನಮೂದಿಸಬಹುದಾಗಿದೆ. ಈ ಡಿಜಿಟಲ್ ಪಾಸ್ಪೋರ್ಟ್ನ್ನು ಪ್ರಪಚದಾದ್ಯಂತ ಬಳಕೆ ಮಾಡಬಹುದಾಗಿದೆ.