ಡೆನ್ಮಾರ್ಕ್ ನಲ್ಲಿ ಅಪ್ಲಿಕೇಷನ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಈ ಅಪ್ಲಿಕೇಷನ್ ನಲ್ಲಿ ಲೈಂಗಿಕ ಕ್ರಿಯೆಗೆ ಅನುಮತಿ ನೀಡಬಹುದು. ಅಪ್ಲಿಕೇಷನ್ ನಲ್ಲಿ ನೀಡಿದ ಒಪ್ಪಿಗೆ ಒಮ್ಮೆ ಸಂಬಂಧ ಬೆಳೆಸುವವರೆಗೆ ಅಥವಾ 24 ಗಂಟೆ ಮಾತ್ರ ಮಾನ್ಯವಾಗಿರುತ್ತದೆ. ಸಂಗಾತಿ ಬಯಸಿದ್ರೆ ಒಪ್ಪಿಗೆಯನ್ನು ವಾಪಸ್ ಪಡೆಯಬಹುದು.
ಕೆಲ ದಿನಗಳ ಹಿಂದಷ್ಟೆ ಡೆನ್ಮಾರ್ಕ್ ನಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಗೆ ಬಂದಿದೆ. ಇದಾದ ನಂತ್ರ iConsent ಹೆಸರಿನ ಅಪ್ಲಿಕೇಷನ್ ಬಿಡುಗಡೆಯಾಗಿದೆ. ಸಂಗಾತಿಗಳ ಒಪ್ಪಿಗೆಯನ್ನು ಗುಪ್ತವಾಗಿಡಲಾಗುವುದು ಎಂದು ಕಂಪನಿ ಹೇಳಿದೆ. ಅಪರಾಧ ಸಂದರ್ಭದಲ್ಲಿ ಮಾತ್ರ ಡೇಟಾವನ್ನು ಕೋರ್ಟ್ ಗೆ ನೀಡುವುದಾಗಿ ಕಂಪನಿ ಹೇಳಿದೆ.
ಡಿಸೆಂಬರ್ ನಲ್ಲಿ ಡೆನ್ಮಾರ್ಕ್ ಸಂಸತ್ ನಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಹೊಸ ಕಾನೂನಿಗೆ ಒಪ್ಪಿಗೆ ಸಿಕ್ಕಿದೆ. ಜನವರಿಯಿಂದ ಕಾನೂನು ಜಾರಿಗೆ ಬಂದಿದೆ. ಒಪ್ಪಿಗೆಯಿಲ್ಲದೆ ಸಂಬಂಧ ಬೆಳೆಸಿದ್ರೆ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದು ಎಂದು ಕಾನೂನಿನಲ್ಲಿ ಹೇಳಲಾಗಿದೆ.
ಆಸಕ್ತರು ಈ ಅಪ್ಲಿಕೇಷನ್ ನಲ್ಲಿ ಅಕೌಂಟ್ ತೆರೆಯಬಹುದು. ಸಂಭೋಗದ ವೇಳೆ ಮಾತ್ರವಲ್ಲ ಮೊದಲು, ನಂತ್ರ ಕೂಡ ಇದಕ್ಕೆ ಒಪ್ಪಿಗೆ ಇರಬೇಕು. ಈ ಅಪ್ಲಿಕೇಷನ್ ನಲ್ಲಿ ಸೆಕ್ಸ್ ಜೀವನಕ್ಕೆ ಸಂಬಂಧಿಸಿದ ಸಲಹೆ, ಮಾಹಿತಿ ಕೂಡ ಸಿಗಲಿದೆ. ಡೆನ್ಮಾರ್ಕ್ ನಲ್ಲಿ ಪ್ರತಿ ವರ್ಷ 11,400ಕ್ಕೂ ಹೆಚ್ಚು ಮಹಿಳೆಯರು ಅತ್ಯಾಚಾರಕ್ಕೊಳಗಾಗ್ತಿದ್ದಾರೆ.