ಫೆಬ್ರವರಿಯು ಪ್ರೇಮದ ತಿಂಗಳು ಎಂದು ಜಗತ್ತಿನೆಲ್ಲೆಡೆ ಖ್ಯಾತಿ ಪಡೆದಿದೆ. ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗುತ್ತಲೇ ತಂತಮ್ಮ ಸಂಗಾತಿಗಳಿಗೆ ಸರ್ಪೈಸ್ ನೀಡಲೆಂದು ಜೋಡಿಗಳು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಬ್ರೇಕಪ್ ಆದ ಒಂದಷ್ಟು ಮಂದಿಗೆ ಈ ಸಮಯ ಬಲೇ ಸಂಕಟಮಯವಾಗಿದೆ.
ಚೀನಾದ ಶಾಂಗ್‌ಡಾಂಗ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಮಾಜಿ ಬಾಯ್‌ಫ್ರೆಂಡ್ ಮೇಲೆ ತನ್ನ ಸಿಟ್ಟನ್ನು ಕಾರಿಕೊಳ್ಳಲು ಬೇರೆಯದ್ದೇ ತಂತ್ರವೊಂದನ್ನು ಕಂಡುಕೊಂಡಿದ್ದಾರೆ. ಮಾಜಿ ಪ್ರಿಯಕರನಿಗೆಂದು ಚಹಾ ಆರ್ಡರ್ ಮಾಡಿದ ಈಕೆ, ಅದರ ಮೇಲೊಂದು ವಿಶೇಷ ಕೋರಿಕೆ ಮಾಡಿಕೊಂಡಿದ್ದಾಳೆ.
ಬೆಳ್ಳಂಬೆಳಗ್ಗೆ CCB ಪೊಲೀಸರಿಂದ ಮತ್ತೊಂದು ಭರ್ಜರಿ ಬೇಟೆ
ತನ್ನ ಮಾಜಿ ಪ್ರಿಯತಮನಿಗೆ ಆರ್ಡರ್ ಮಾಡಿದ ಚಹಾವನ್ನು ಡೆಲಿವರಿ ಮಾಡಿ, ಆತನ ಮೇಲೆ ಎರಚಲು ಡೆಲಿವರಿ ಚಾಲಕನಿಗೆ ಈಕೆ ಕೋರಿಕೊಂಡಿದ್ದಾಳೆ. “ಆತನೊಂದಿಗೆ ವಿನಯವಾಗಿ ಇರುವ ಅಗತ್ಯವೇನಿಲ್ಲ. ಸುಮ್ಮನೇ ಹಾಗೇ ಆತನ ಮುಖದ ಮೇಲೆ ಚಹಾವನ್ನು ಎರಚಿಬಿಡಿ,” ಎಂದು ಆಕೆ ಕೋರಿಕೊಂಡಿದ್ದಾಳೆ.
ತನ್ನ ಗ್ರಾಹಕನ ಕೋರಿಕೆಯನ್ನು ಪೂರೈಸಿದ ಡೆಲಿವರಿ ಚಾಲಕ, ಆಕೆಯ ಮಾತಿನಂತೆಯೇ ಚಹಾವನ್ನು ಮಾಜಿ ಬಾಯ್‌ಫ್ರೆಂಡ್ ಮೇಲೆ ಎರಚಿದ್ದಾನೆ.
https://www.youtube.com/watch?v=9EvUdb_kN3E&feature=emb_logo