ಟೋಕಿಯೋ: ಕೊರೊನಾ ವೈರಸ್ ಕಾರಣದಿಂದ ನೆಲ ಕಚ್ಚಿರುವ ರೆಸ್ಟೋರೆಂಟ್ ವಹಿವಾಟಿಗೆ ಬೂಸ್ಟ್ ನೀಡಲು ಜಪಾನ್ ರೆಸ್ಟೋರೆಂಟ್ ಒಂದು ಹೊಸ ಉಪಾಯ ಹುಡುಕಿದೆ.
ಜಪಾನ್ ನ ಸುಶಿ ರೆಸ್ಟೋರೆಂಟ್ ನಲ್ಲಿ ತಿನಿಸುಗಳನ್ನು ಆರ್ಡರ್ ಮಾಡಿದರೆ ಡೆಲಿವರಿ ಮಾಡಲು ಬಾಡಿ ಬಿಲ್ಡರ್ ಗಳು ಬರುತ್ತಾರೆ. ಆಹಾರ ಪೊಟ್ಟಣ ಕೊಟ್ಟ ನಂತರ ಜನ ಬೇಕು ಎಂದರೆ ತಮ್ಮ ದೇಹದಾರ್ಡ್ಯತೆಯನ್ನು ಪ್ರದರ್ಶನ ಮಾಡುತ್ತಾರೆ.
“ಡೆಲಿವರಿ ಮಾಚೊ” ಎಂಬ ಈ ಯೋಜನೆಯನ್ನು ರೆಸ್ಟೋರೆಂಟ್ ನ 41 ವರ್ಷದ ಬಾಣಸಿಗ ಮಾಸ್ನೋರಿ ಸುಗಿಯೋರಾ ಎಂಬುವವರು ಪ್ರಾರಂಭಿಸಿದ್ದಾರೆ. ಗ್ರಾಹಕ ಗರಿಷ್ಠ ಎಂದರೆ 7 ಸಾವಿರ ಯೆನ್ ಆಹಾರ ಆರ್ಡರ್ ಮಾಡಬಹುದು. ಈ ಹೊಸ ಐಡಿಯಾದಿಂದ ರೆಸ್ಟೋರೆಂಟ್ ಗೆ ದಿನಕ್ಕೆ ಕನಿಷ್ಠ 10 ಹೋಂ ಡೆಲಿವರಿ ಆರ್ಡರ್ ಗಳು ಬರುತ್ತಿವೆ. ತಿಂಗಳಿಗೆ 1.5 ಮಿಲಿಯನ್ ಯೆನ್ ಗಳ ವ್ಯವಹಾರವಾಗುತ್ತಿದೆ.