ಇಂಗ್ಲೆಂಡ್: ಪರಿಸರ ಮಾಲಿನ್ಯ ಮಕ್ಕಳ ಆರೋಗ್ಯದ ಮೇಲೆ ಮಾತ್ರವಲ್ಲ ಕಲಿಕೆಯ ಮೇಲೂ ನೇರ ಪರಿಣಾಮ ಬೀರುತ್ತದೆ ಎಂದು ಲಂಡನ್ ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ಹೇಳಿದೆ.
ಶೇ.20 ರಷ್ಟು ಮಾಲಿನ್ಯ ಇಳಿಕೆ ಶಾಲೆಗೆ ಹೋಗುವ ಮಕ್ಕಳ ಕಲಿಕಾ ಸಾಮರ್ಥ್ಯವನ್ನು 1 ತಿಂಗಳಿನಷ್ಟು ಹೆಚ್ಚಿಸುತ್ತದೆ. ಶಾಲೆಯ ಸುತ್ತಲೂ ವಾಯು ಮಾಲಿನ್ಯದ ಪ್ರಮಾಣ ಕಡಿಮೆ ಇದ್ದರೆ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸಲಿದೆ. ಮುಖ್ಯವಾಗಿ ವಾಹನದಿಂದ ಹೊರ ಸೂಸುವ ನೈಟ್ರೋಜನ್ ಡೈಯಾಕ್ಸೈಡ್ ಪ್ರಮಾಣ ಶೇ.5 ರಷ್ಟು ಕಡಿಮೆಯಾದರೆ, ಮಕ್ಕಳ ಅಧ್ಯಯನ ಶಕ್ತಿ ಶೇ. 6.1 ರಷ್ಟು ಹೆಚ್ಚಲಿದೆ ಎಂದು ವರದಿ ಹೇಳಿದೆ.
ಮಾಲಿನ್ಯ ಇಳಿಕೆಯಿಂದ ಮಕ್ಕಳ ಓದಿಗೆ ಅನುಕೂಲವಾಗಲಿದೆ ಎಂಬುದನ್ನು ಸಾಬೀತು ಮಾಡಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದ ಪರಿಸರ ಆರೋಗ್ಯ ತಜ್ಞೆ ಪ್ರೊಫೆಸರ್ ಮಾರ್ತೈ ವೆನ್ ಟೆಂಗೆರನ್ ಹೇಳಿದ್ದಾರೆ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.