alex Certify ‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್.

1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ ನಡೆಯಿತು. ಡೆತ್ ವ್ಯಾಲಿಯ ಸಮೀಪದ ಪರ್ವತಗಳಲ್ಲಿ ಚಿನ್ನವನ್ನು ಪತ್ತೆ ಹಚ್ಚಲಾಯ್ತು. ಕಣಿವೆಯನ್ನು ದಾಟುವಾಗ ಅನೇಕ ಜನರು ಬಾಯಾರಿಕೆ ಹಾಗೂ ಆಯಾಸದಿಂದ ಪ್ರಾಣ ತೆತ್ತರು. ಈ ಕಾರಣಕ್ಕಾಗಿ ಇದಕ್ಕೆ ಡೆತ್ ವ್ಯಾಲಿ ಎಂಬ ಹೆಸರು ಬಂತು.

ಡೆತ್ ವ್ಯಾಲಿಯ ಅಗಲ 8 ರಿಂದ 24 ಕಿ.ಮೀ. ಗಳಷ್ಟಿದೆ. ಸಮುದ್ರ ಮಟ್ಟಕ್ಕಿಂತ 86 ಮೀಟರ್ ಕೆಳಗಿರುವುದರಿಂದ ಇದರ ಉಷ್ಣಾಂಶ 49 ಡಿಗ್ರಿ ಸೆಂಟಿಗ್ರೇಡ್ ತನಕವೂ ಏರುತ್ತದೆ. ಈ ಕಾರಣದಿಂದಾಗಿ ಇದನ್ನು ಉತ್ತರ ಅಮೆರಿಕದ ಅತ್ಯಂತ ಉಷ್ಣಪ್ರದೇಶ ಎಂದು ಹೇಳಲಾಗುತ್ತದೆ.

ಇಲ್ಲಿ ವರ್ಷಕ್ಕೆ ಹೆಚ್ಚೆಂದರೆ 5 ಸೆಂ.ಮೀ. ಮಳೆಯಾಗುತ್ತದೆ. ಇಡೀ ಕಣಿವೆ ಮರಳಿನಿಂದಲೇ ತುಂಬಿಕೊಂಡಿದೆ. ಇಲ್ಲಿ ಯಾವುದೇ ಸಸ್ಯಗಳು ಬೆಳೆಯುವುದಿಲ್ಲ. ಈ ಕಾರಣಕ್ಕಾಗಿಯೇ ಇಲ್ಲಿ ಮನುಷ್ಯರು ವಾಸಿಸುವುದಿಲ್ಲ. ಮೊಲ, ಅಳಿಲು, ಇಲಿಗಳು ಮುಂತಾದ ಪ್ರಾಣಿಗಳು ಕಂಡುಬರುತ್ತವೆ.

1933 ರಲ್ಲಿ ಈ ಪ್ರದೇಶವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲಾಯ್ತು. ಈಗ ಪ್ರತಿವರ್ಷ ಸುಮಾರು ಐದು ಲಕ್ಷ ಜನರು ಈ ಕಣಿವೆಗೆ ಭೇಟಿ ಕೊಡುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...