ಮಗಳನ್ನು ಕಳೆದುಕೊಂಡು ದುಃಖದಲ್ಲಿ ಅಂತ್ಯ ಸಂಸ್ಕಾರಕ್ಕೆ ತಯಾರಿ ನಡೆಸಿದ್ದ ತಾಯಿ ದಂಗಾಗಿದ್ದಳು. ಶವಕ್ಕೆ ನೀರು ಹಾಕ್ತಿದ್ದಂತೆ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಹುಡುಗಿ ಎದ್ದು ಕುಳಿತಿದ್ದಳು. ಇದನ್ನು ನೋಡಿ ಖುಷಿಯಾಗಿದ್ದ ಕುಟುಂಬಸ್ಥರ ಸಂತೋಷ ತುಂಬಾ ಸಮಯ ಉಳಿಯಲಿಲ್ಲ. ಕೆಲ ಸಮಯದ ನಂತ್ರ ಬಾಲಕಿ ಮತ್ತೆ ಇಹಲೋಕ ತ್ಯಜಿಸಿದ್ದಳು.
ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮಧುಮೇಹ ರೋಗದಿಂದ ಬಳಲ್ತಿದ್ದ 12 ವರ್ಷದ ಬಾಲಕಿ ಸಿಟಿ ಮಸ್ಫುಫಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದರು. ದುಃಖದಲ್ಲಿ ಮನೆಯವರು ಶವಕ್ಕೆ ನೀರು ಹಾಕುವ ಕೆಲಸ ಶುರು ಮಾಡಿದ್ದರು. ಆವರೆಗೆ ತಣ್ಣಗಿದ್ದ ದೇಹ ಬಿಸಿಯಾಗಿತ್ತು. ಹೃದಯ ಬಡಿತ ಶುರುವಾಗಿ ಬಾಲಕಿ ಎದ್ದು ಕುಳಿತಿದ್ದಳು.
ತಕ್ಷಣ ಕುಟುಂಬಸ್ಥರು ವೈದ್ಯರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ವೈದ್ಯರು ಆಕ್ಸಿಜನ್ ಹಾಕುವ ಪ್ರಯತ್ನ ನಡೆಸಿದ್ದರು. ಆದ್ರೆ ಬಾಲಕಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 2007ರಲ್ಲಿ ಒಮ್ಮೆ ಈ ರೀತಿಯ ಪ್ರಕರಣ ನಡೆದಿತ್ತು. ಆದ್ರೆ ಹೃದಯಬಡಿತ ನಿಂತು 10 ನಿಮಿಷಗಳ ನಂತ್ರ ಮತ್ತೆ ಹೃದಯ ಬಡಿತ ಶುರುವಾಗಿತ್ತು. ಆದ್ರೆ ಒಂದು ಗಂಟೆ ನಂತ್ರ ಹೃದಯ ಬಡಿತ ಶುರುವಾಗಿ ಎದ್ದು ಕುಳಿತ ಪ್ರಕರಣ ಇದೇ ಮೊದಲು ಎನ್ನುತ್ತಾರೆ ವೈದ್ಯರು.