ಮಹಿಳೆ ಸಾವನ್ನಪ್ಪಿ ಎರಡು ವರ್ಷ ಕಳೆದರೂ ಸಹ ಮಕ್ಕಳು ಆಕೆಯ ದೇಹಕ್ಕೆ ಅಂತ್ಯಕ್ರಿಯೆ ಮಾಡದೇ ಆಕೆಯ ಕೋಣೆಯಲ್ಲೇ ಮೃತದೇಹವನ್ನ ಇಟ್ಟ ಘೋರ ಘಟನೆಯೊಂದು ಅಮೆರಿಕದ ಟನ್ನೆಸ್ಸಿ ಎಂಬಲ್ಲಿ ಬೆಳಕಿಗೆ ಬಂದಿದೆ.
ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮಹಿಳೆಯನ್ನ ಲಾರಿಂಡಾ ಜಾಲಿ ಎಂದು ಗುರುತಿಸಲಾಗಿದೆ. ಈಕೆ ಸತ್ತು ವರ್ಷಗಳೇ ಕಳೆದಿದ್ದು ಅಕ್ಟೋಬರ್ 21ರಂದು ಮೃತದೇಹ ಪತ್ತೆ ಮಾಡಲಾಗಿದೆ. ಆಕೆಯ ಕೊಳೆತ ದೇಹ ಆಕೆಯ ಹಾಸಿಗೆಯ ಬಟ್ಟೆಯ ರಾಶಿಗಳ ನಡುವೆ ಇಡಲಾಗಿದೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮೃತ ಲಾರಿಂಡಾ ಸಹೋದರ ಆಂಟನಿ ಜಾಲಿ ಆಕೆ ಸತ್ತು ಎರಡಲ್ಲ ಬದಲಾಗಿ ಅದಕ್ಕೂ ಹೆಚ್ಚು ವರ್ಷಗಳೇ ಕಳೆದಿದೆ. ಈ ಬಗ್ಗೆ ಆಕೆಯ ಮಗಳನ್ನ ಕರೆದು ಕೇಳಿದಾಗ ನನಗೆ ಅವಳು ತಾಯಿ 2017ರಲ್ಲೇ ಸತ್ತಿದ್ದರು ಎಂದು ಹೇಳಿದ್ದಳು. ಈ ವಿಚಾರ ಕೇಳಿ ನಾನೇ ಆಘಾತಕ್ಕೊಳಗಾದೆ ಎಂದು ಹೇಳಿದ್ದಾರೆ.
ಲಾರಿಂಡಾರ ಮಕ್ಕಳು ಆಕೆಯ ಆದೇಶವನ್ನ ಮೀರಿ ನಡೆಯುತ್ತಿರಲಿಲ್ಲ. ತಾಯಿ ಹೇಳಿದಂತೆ ಕೇಳುತ್ತಿದ್ದ ಮಕ್ಕಳು ಎರಡೂ ವರ್ಷಕ್ಕೂ ಅಧಿಕ ಕಾಲ ಶವವನ್ನ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.