alex Certify ಪಾಕ್ ನಟಿ ವಿಷ್ಯ ಹೊರ ಬರ್ತಿದ್ದಂತೆ ದಾವೂದ್ ಇಬ್ರಾಹಿಂಗೆ ‌ʼಶಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ನಟಿ ವಿಷ್ಯ ಹೊರ ಬರ್ತಿದ್ದಂತೆ ದಾವೂದ್ ಇಬ್ರಾಹಿಂಗೆ ‌ʼಶಾಕ್ʼ

 Dawood Ibrahim upset over report exposing his relationship with Pakistani actress Mehwish Hayat

ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನದ ನಟಿ ಮೆಹ್ವಿಶ್ ಜೊತೆ ನಂಟಿಗೆ ಎಂಬ ವಿಷ್ಯ ಬಹಿರಂಗವಾಗಿದೆ. ಮಾಧ್ಯಮಗಳಲ್ಲಿ ಈ ವರದಿ ಪ್ರಸಾರವಾಗ್ತಿದ್ದಂತೆ ದಾವೂದ್ ಇಬ್ರಾಹಿಂ ಶಾಕ್‌ ಆಗಿದ್ದಾನೆ ಎನ್ನಲಾಗಿದೆ. ದಾವೂದ್ ಇಬ್ರಾಹಿಂ ಯಾರಿಂದ ಈ ಸುದ್ದಿ ಬಹಿರಂಗವಾಗಿದೆ ಎಂಬ ಬಗ್ಗೆ ತನಿಖೆ ಶುರು ಮಾಡಿದ್ದಾನಂತೆ.

ಪಾಕಿಸ್ತಾನದ ನಟಿ ಮೆಹ್ವಿಶ್, ದಾವೂದ್ ಗಿಂತ 27 ವರ್ಷ ಚಿಕ್ಕವಳು. ಮೆಹ್ವಿಶ್ ಳನ್ನು ಗ್ಯಾಂಗ್ ಸ್ಟಾರ್ ಡಾಲ್, ಕ್ಯಾಟ್ ಇನ್ ಪಾಕಿಸ್ತಾನ್ ಎಂದು ಕರೆಯಲಾಗುತ್ತದೆ. ದಾವೂದ್ ಜೊತೆ ಮೆಹ್ವಿಶ್ ಸಂಬಂಧ ಹೊಂದಿದ್ದಾಳೆ ಎಂಬುದು 2019ರಲ್ಲಿ ಬಹಿರಂಗಗೊಂಡಿತ್ತು. ಪಾಕಿಸ್ತಾನದ ಪ್ರಸಿದ್ಧ ತಮ್ಗಾ-ಇ-ಇಮ್ತಿಯಾಜ್ ಪ್ರಶಸ್ತಿಯನ್ನು ಮೆಹ್ವಿಶ್ ಗೆ ನೀಡಲಾಗಿತ್ತು. ಆಗಷ್ಟೆ ವೃತ್ತಿ ಜೀವನ ಶುರು ಮಾಡಿದ್ದ ಮೆಹ್ವಿಶ್ ಗೆ ಈ ಪ್ರಶಸ್ತಿ ಸಿಗಲು ಕಾರಣವಾಗಿದ್ದು ದಾವೂದ್ ಎಂಬುದು ಗೊತ್ತಾಗಿತ್ತು.

ಐಟಂ ಡಾನ್ಸ್ ಮೂಲಕ ವೃತ್ತಿಗೆ ಬಂದ ಮೆಹ್ವಿಶ್ ದಾವೂದ್ ಗಮನ ಸೆಳೆದಿದ್ದಳು. ದಾವೂದ್ ಆಕೆ ಸಂಪರ್ಕಕ್ಕೆ ಬರ್ತಿದ್ದಂತೆ ಮೆಹ್ವಿಶ್ ದೊಡ್ಡ ಪ್ರಾಜೆಕ್ಟ್ ನಲ್ಲಿ ಕೆಲಸ ಶುರು ಮಾಡಿದ್ದಳು. ಇಬ್ಬರ ಮಧ್ಯೆ ಸಾಕಷ್ಟು ಆಪ್ತತೆಯಿದ್ದು, ಆಕೆಯೇ ದಾವೂದ್ ವೀಕ್ನೆಸ್ ಎಂಬ ಮಾತೂ ಇದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...