ಭೂಗತ ಪಾತಕಿ ದಾವೂದ್ ಇಬ್ರಾಹಿಂ ಯಾವತ್ತೂ ಸಹ ತನ್ನ ಪ್ರಜೆಯಾಗಿರಲಿಲ್ಲ ಎಂದು ಡೊಮಿನಿಕಾ ದೇಶದ ಸರ್ಕಾರ ಅಧಿಕೃತವಾಗಿ ಹೇಳಿಕೆ ಕೊಟ್ಟಿದೆ.
“ದಾವೂದ್ ಇಬ್ರಾಹಿಂ ಕಸ್ಕರ್, ಪೌರತ್ವ ಅಥವಾ ಹೂಡಿಕೆ ಯೋಜನೆಗಳು ಅಥವಾ ಇನ್ನಾವುದೇ ಮಾರ್ಗದಿಂದಲೂ, ಎಂದಿಗೂ ಸಹ ಡೊಮಿನಿಕಾ ದೇಶದ ಪೌರನಾಗಿ ಇರಲಿಲ್ಲ. ಈ ಸಂಬಂಧ ಯಾವುದೇ ಮಾಧ್ಯಮದಲ್ಲಿ ಬರುವ ಪ್ರಕಟಣೆಗಳು ಶುದ್ಧ ಸುಳ್ಳು” ಎಂದು ದ್ವೀಪ ದೇಶದ ಸರ್ಕಾರ ತಿಳಿಸಿದೆ.
ಮುಂಬೈಯಲ್ಲಿ 1993ರಲ್ಲಿ ಘಟಿಸಿದ ಸರಣಿ ಸ್ಫೋಟಗಳ ಕೇಸ್‌ನಲ್ಲಿ ಭಾರತಕ್ಕೆ ವಾಂಟೆಡ್ ಆಗಿರುವ ದಾವೂದ್ ಇಬ್ರಾಹಿಂನನ್ನು ಹಸ್ತಾಂತರಿಸಲು ಪಾಕಿಸ್ತಾನಕ್ಕೆ ಭಾರತ ಮನವಿ ಮಾಡುತ್ತಲೇ ಬಂದಿದೆ.
ದಾವೂದ್‌ಗೆ ತಾನು ಆಶ್ರಯ ಕೊಡುತ್ತಿರುವ ವಿಚಾರವನ್ನು ನಿರಾಕರಿಸುತ್ತಲೇ ಬಂದಿರುವ ಪಾಕಿಸ್ತಾನ ಇತ್ತೀಚೆಗೆ ಅಂತಾರಾಷ್ಟ್ರೀಯ ಒತ್ತಡ ಬಿದ್ದ ಮೇಲೆ ಕರಾಚಿಯ ಪ್ರತಿಷ್ಠಿತ ಪ್ರದೇಶವೊಂದರಲ್ಲಿ ಆತನನ್ನು ಇಟ್ಟುಕೊಂಡಿರುವ ದಾಖಲೆಗಳನ್ನು ಬಿಡುಗಡೆ ಮಾಡಿದೆ.