alex Certify ಜ್ವಾಲಾಮುಖಿ ಲಾವಾರಸದ ಶಾಖದಿಂದ ತಯಾರಾಯ್ತು ಪಿಜ್ಜಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜ್ವಾಲಾಮುಖಿ ಲಾವಾರಸದ ಶಾಖದಿಂದ ತಯಾರಾಯ್ತು ಪಿಜ್ಜಾ..!

ಪಿಜ್ಜಾಗಳನ್ನ ಓವನ್​ಗಳಲ್ಲಿ ಮಾಡ್ತಾರೆ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರೋದೇ. ಇನ್ನು ಸಿಂಪಲ್​ ಆಗಿ ಪಿಜ್ಜಾ ಮಾಡುವವರು ಮನೆಯಲ್ಲಿ ಒಲೆಯ ಮೇಲೂ ಮಾಡುತ್ತಾರೆ.

ಆದರೆ ಎಂದಾದರೂ ಜ್ವಾಲಾಮುಖಿಯ ಲಾವಾರಸದಲ್ಲಿ ಪಿಜ್ಜಾ ಮಾಡೋದು ಹಾಗಿರಲಿ ಎಂದಾದರೂ ಈ ರೀತಿ ಮಾಡೋದನ್ನ ಊಹಿಸಿಕೊಂಡಿದ್ದೀರಾ..? ಆದರೆ ಇಂತಹದ್ದೊಂದು ಪ್ರಯತ್ನವನ್ನೂ ಓರ್ವ ಮಾಡಿ ತೋರಿಸಿದ್ದಾರೆ.

ಡೇವಿಡ್​​ ಗಾರ್ಸಿಯಾ ಎಂಬ ವ್ಯಕ್ತಿ ಪಿಜ್ಜಾವನ್ನ ಲಾವಾರಸದ ಸಹಾಯದಿಂದ ಬೇಯಿಸಿದ್ದಾರೆ. ಸೆಂಟ್ರಲ್​ ಅಮೆರಿಕನ್​ ಕಂಟ್ರಿಯಲ್ಲಿ ಈ ಘಟನೆ ನಡೆದಿದೆ.

ಕೊರೊನಾ, ಲಾಕ್ ಡೌನ್ ಮಧ್ಯೆ ಹೆಚ್ಚಾಗಿದೆ ಇದಕ್ಕೆ ಬೇಡಿಕೆ

ವೃತ್ತಿಯಲ್ಲಿ ಲೆಕ್ಕಿಗನಾಗಿರುವ ಈ ವ್ಯಕ್ತಿ ವಿಶೇಷವಾದ ಶೀಟ್​ಗಳನ್ನ ಬಳಸಿ 1800 ಫ್ಯಾರನ್​ ಹೀಟ್​​ ಶಾಖದಲ್ಲಿ ಪಿಜ್ಜಾವನ್ನ ಮಾಡಿದ್ದಾರೆ. ಬಹುತೇಕ ಮಂದಿ ಪ್ರವಾಸಿಗರು ಈ ಪಿಜ್ಜಾದ ಸವಿ ನೋಡಲೆಂದೇ ಇಲ್ಲಿಗೆ ಆಗಮಿಸ್ತಾರಂತೆ.

ಗಾರ್ಸಿಯಾ 2013ರಿಂದ ಈ ರೀತಿ ಲಾವಾರಸದಲ್ಲಿ ಪಿಜ್ಜಾವನ್ನ ಮಾಡ್ತಿದ್ದಾರೆ. ಈ ಲಾವಾರಸವು ಓವನ್​ನಂತೆಯೇ ಕೆಲಸ ಮಾಡೋದ್ರಿಂದ ಇದರಲ್ಲಿ ಪಿಜ್ಜಾ ಮಾಡಬಹುದಂತೆ. ಗಾಳಿ ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನ ಆಧರಿಸಿ ಗಾರ್ಸಿಯಾ ಈ ರೀತಿಯ ಪಿಜ್ಜಾಗಳನ್ನ ತಯಾರು ಮಾಡುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...