ಕಿರುತೆರೆಯ ದಂತಕಥೆ ಹಾಗೂ ಪರಿಸರವಾದಿ ಡೇವಿಡ್ ಅಟೆನ್‌ಬರೋ ಬ್ರಿಟನ್‌ನ ಪ್ರಿನ್ಸ್ ಜಾರ್ಜ್‌ಗೆ ಬೃಹತ್ ಶಾರ್ಕ್ ಒಂದರ ಹಲ್ಲಿನ ಪಳೆಯುಳಿಕೆಯೊಂದನ್ನು ಗಿಫ್ಟ್ ಕೊಟ್ಟಿದ್ದಾರೆ.
ಕೆನ್ಸಿಂಗ್ಟನ್ ಪ್ಯಾಲೇಸ್‌ನಲ್ಲಿ ತಮ್ಮ ಹೊಸ ಡಾಕ್ಯುಮೆಂಟರಿಯ ಖಾಸಗಿ ವೀಕ್ಷಣೆ ಸಂದರ್ಭದಲ್ಲಿ ಅಟೆನ್‌ಬರೋ, ಮೂರು ದಶಲಕ್ಷ ವರ್ಷಗಳಷ್ಟು ಹಳೆಯದಾದ ಈ ಪಳೆಯುಳಿಕೆಯನ್ನು ಏಳು ವರ್ಷದ ಯುವರಾಜನಿಗೆ ನೀಡಿದ್ದಾರೆ. ಈ ಹಲ್ಲು, ಇಂದಿನ ದಿನಗಳಲ್ಲಿ ಇರುವ ಬಿಳಿ ಶಾರ್ಕ್‌ಗಳ ಹಲ್ಲಿಗಿಂತ ಮೂರು ಪಟ್ಟು ದೊಡ್ಡದಿದೆ. ಜಾರ್ಜ್ ತಂದೆ ವಿಲಿಯಂ ಜೊತೆಗೆ ಪ್ಯಾಲೇಸ್‌ನಲ್ಲಿ, ಪ್ರಕೃತಿಯೊಡನೆ ತಮ್ಮ ಜೀವಿತದ ಒಡನಾಟದ ಡಾಕ್ಯುಮೆಂಟರಿಯನ್ನು ಶೇರ್ ಮಾಡಿಕೊಂಡಿದ್ದಾರೆ ಅಟೆನ್‌ಬರೋ.
1960ರ ದಶಕದಲ್ಲಿ, ತಮ್ಮ ಕುಟುಂಬದೊಂದಿಗೆ ಮಾಲ್ಟಾದಲ್ಲಿ ಹಾಲಿಡೇ ಮಾಡುತ್ತಿದ್ದ ಅಟೆನ್‌ಬರೋಗೆ ಈ ಹಲ್ಲಿನ ಪಳೆಯುಳಿಕೆ ಸಿಕ್ಕಿತ್ತು. ತಮ್ಮಿಡೀ ಜೀವನವನ್ನು ಪಕೃತಿಯ ವಿಸ್ಮಯಗಳ ಪಳೆಯುಳಿಕೆಗಳನ್ನು ಸಂಗ್ರಹಿಸುತ್ತಾ ಕಳೆದಿದ್ದಾರೆ ಅಟೆನ್‌ಬರೋ.