ಕಾರನ್ನ ಬಳಕೆ ಮಾಡುವವರು ಹೂಡ್ನ್ನ ಎತ್ತಿ ಎಂಜಿನ್ ಚೆಕಪ್ ಮಾಡೇ ಮಾಡ್ತಾರೆ. ಇಂಜಿನ್ನಲ್ಲಿ ಸಮಸ್ಯೆ ಇದೆ ಅಂತಾ ಅನುಮಾನ ಬಂತು ಅಂದ್ರೆ ಗ್ಯಾರೇಜ್ಗೆ ಕಾರನ್ನ ತೆಗೆದುಕೊಂಡು ಹೋಗ್ತೀರಾ. ಆದರೆ ಇಲ್ಲೊಬ್ಬ ಕಾರು ಮಾಲೀಕ ಹೂಡ್ನ್ನ ಎತ್ತಿ ನೋಡಿದ ಬಳಿಕ ಅರಣ್ಯ ಇಲಾಖೆಗೆ ಫೋನಾಯಿಸಿದ್ದಾರೆ.
ಫೋರ್ಡ್ ಮಸ್ಟಾಂಗ್ ಕಾರು ಮಾಲೀಕ ಫ್ಲೋರಿಡಾದ ಡೇನಿಯಾ ಬೀಚ್ ಬಳಿಯಲ್ಲಿ ತಮ್ಮ ಕಾರಿನ ಹೂಡ್ನ್ನ ಎತ್ತಿ ನೋಡಿದ್ದಾರೆ. ಈ ವೇಳೆ ಬರೋಬ್ಬರಿ 10 ಅಡಿ ಉದ್ದದ ಹೆಬ್ಬಾವು ಕಾರಿನ ಎಂಜಿನ್ಗೆ ಸುತ್ತುವರಿದಿದ್ದನ್ನ ನೋಡಿ ಶಾಕ್ ಆಗಿದ್ದಾರೆ .
ಕಾರಿನ ಎಂಜಿನ್ ಲೈಟ್ ಸರಿಯಾಗಿ ಕಾರ್ಯ ನಿರ್ವಹಿಸ್ತಾ ಇಲ್ಲದ ಕಾರಣ ಮಾಲೀಕ ಡೇನಿಯಾ ಬೀಚ್ ಸಮೀಪವಿದ್ದ ಗ್ಯಾರೇಜ್ಗೆ ತಮ್ಮ ಕಾರನ್ನ ತೆಗೆದುಕೊಂಡು ಹೋಗಿದ್ರು. ಈ ವೇಳೆ ಗ್ಯಾರೇಜ್ನಲ್ಲಿದ್ದ ಹುಡುಗರು ಮಾಲೀಕನ ಸಮ್ಮುಖದಲ್ಲೇ ಹೂಡ್ ಎತ್ತಿ ನೋಡಿದಾಗ ಈ ಹೆಬ್ಬಾವು ಪತ್ತೆಯಾಗಿದೆ. ಕೂಡಲೇ ಈ ವಿಚಾರವನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಯ್ತು.
ಸ್ಥಳಕ್ಕಾಗಮಿಸಿದ ಅಧಿಕಾರಗಳು ಹೆಬ್ಬಾವನ್ನ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಇಂಜಿನ್ಗೆ ಸುತ್ತಿಕ್ಕೊಂಡಿರುವ ಹಾವಿನ ವಿಡಿಯೋವನ್ನ ಫ್ಲೋರಿಡಾ ವನ್ಯಜೀವಿ ಫೇಸ್ಬುಕ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದೆ.