ಒಂಬತ್ತು ವರ್ಷದ ಬಾಲಕ ಯಾವುದೇ ವಿಶೇಷ ತರಬೇತಿ ಇಲ್ಲದೆ ತನ್ನ ತಂದೆಯನ್ನು ಅಪಾಯದಿಂದ ರಕ್ಷಿಸಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ.
ಫ್ಲೋರಿಡಾ ಬ ಪೆನ್ಸಕೊಲಾದ ಶಾಂತ ನೀರಿನ ಸಾಗರದಲ್ಲಿ ಮುಳುಗುತ್ತಿದ್ದ ತಂದೆಯನ್ನು ಅಸೈಹ್ ವಿಲಿಯಮ್ಸ್ ಎಂಬ ಬಾಲಕ ರಕ್ಷಿಸಿದ್ದಾನೆ.
ತಂದೆ ಜೋಶ್ ವಿಲಿಯಮ್ಸ್ ನೀರಿನ ಆಳವನ್ನು ಊಹಿಸದೇ ಈಜಲು ತಲೆ ಕೆಳಗಾಗಿ ಧುಮುಕಿದ್ದರು. ಮಗ ವಿಲಿಯಮ್ಸ್ ದಡದಲ್ಲಿ ನಿಂತಿದ್ದ . ಆದರೆ, ತಂದೆ ನೀರಿನಲ್ಲಿ ಈಜಲು ಕಷ್ಟ ಪಡುತ್ತಿರುವುದನ್ನು ಆತ ಗಮನಿಸಿದ, ತಾಯಿ ಸ್ವಲ್ಪ ದೂರದಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಇದರಿಂದ ಬಾಲಕ ತಕ್ಷಣ ನೀರಿಗೆ ಧುಮುಕಿ ತನ್ನೆಲ್ಲ ಶಕ್ತಿ ಬಳಸಿ ತಂದೆಯನ್ನು ದಡಕ್ಕೆ ಎಳೆ ತಂದಿದ್ದಾನೆ.
“ನಾನು ಚಿಕ್ಕ ಮಗುವಿನ ಜತೆ ದೂರ ಆಡುತ್ತಿದ್ದೆ. ತಂದೆ, ಮಗ ಈಜಲು ತೆರಳಿದ್ದರು. ನೀರಿನ ಆಳ ಸುಮಾರು 15 ಅಡಿ ಇರುವುದನ್ನು ಗಮನಿಸದ ಕಾರಣ ಜೋಶ್ ವಿಲಿಯಮ್ಸ್ ಅಪಾಯಕ್ಕೆ ಸಿಲುಕಿದ್ದರು” ಎಂದು ತಾಯಿ ಆ್ಯಂಡ್ರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ನಂತರ ಬಾಲಕ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾನೆ.