ತನ್ನ ಮಗಳು ತೊಟ್ಟ ಬಟ್ಟೆಯಂತೆಯೇ ತಾನೂ ಸಹ ವಸ್ತ್ರ ಧರಿಸಿರುವ ಅಪ್ಪನೊಬ್ಬ ’ಬ್ಯೂಟಿ ಅಂಡ್ ಬೀಸ್ಟ್’ ಚಿತ್ರದ ಬೆಲ್ಲೆ ಪಾತ್ರವನ್ನು ನೆನಪಿಸುತ್ತಿದ್ದಾರೆ.
ಜೋಯೆ ಡೀನ್ ಹೆಸರಿನ ಈ ವ್ಯಕ್ತಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಾಕಿಕೊಂಡಿದ್ದು, ತನ್ನ ಮಗಳ ಹಾಗೂ ತನ್ನ ಚಿತ್ರವನ್ನು ಅಕ್ಕಪಕ್ಕ ಇರಿಸಿದ್ದಾರೆ. ಖುದ್ದು ತಾನೇ ಗೌನ್ಧಾರಿಯಾಗಿರುವ ಡೀನ್, ಕನ್ನಡಿ ಮುಂದೆ ನಿಂತುಕೊಂಡು ಸೆಲ್ಫೀ ತೆಗೆದುಕೊಂಡಿದ್ದಾರೆ.
ಮಗಳಿಗೆಂದು ಯುವರಾಣಿಯ ಕಾಸ್ಟ್ಯೂಮ್ ತೆಗೆದುಕೊಟ್ಟಿರುವ ಡೀನ್, ತಾನು ಅದೇ ಕಥೆಯ ದೆವ್ವದ ರೂಪದಲ್ಲಿ ಬರಲೇ ಎಂದು ಮಗಳನ್ನು ಕೇಳಿದ್ದಾರೆ. ಆಗ ತನ್ನಂತೆಯೇ ಬಟ್ಟೆ ಧರಿಸಿಕೊಂಡು ಬರಲು ಕೇಳಿಕೊಂಡ ಮಗಳ ಮಾತಿಗೆ ಮನ್ನಣೆ ಕೊಟ್ಟ ಡೀನ್, ಬೆಲ್ಲೆ ಅವತಾರದಲ್ಲಿ ಪೋಸ್ ಕೊಟ್ಟು ತೆಗೆದುಕೊಂಡ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
https://twitter.com/DoeyJean/status/1308577629511888897?ref_src=twsrc%5Etfw%7Ctwcamp%5Etweetembed%7Ctwterm%5E1308577629511888897%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fdad-of-the-year-man-dresses-up-as-belle-from-beauty-and-the-beast-to-twin-with-his-daughter-wins-hearts%2F658405
https://twitter.com/earth2hydn/status/1309600181059420161?ref_src=twsrc%5Etfw%7Ctwcamp%5Etweetembed%7Ctwterm%5E1309600181059420161%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fdad-of-the-year-man-dresses-up-as-belle-from-beauty-and-the-beast-to-twin-with-his-daughter-wins-hearts%2F658405