ತನ್ನ ಶಾಲೆಯ ಆನ್ಲೈನ್ ಕ್ಲಾಸ್ ವೇಳೆ ಆರ್ಟ್ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದ ಬಾಲಕಿಯೊಬ್ಬಳಿಗೆ ಆಕೆಯ ಅಪ್ಪ ಹಾಗೂ ಸಹೋದರ ಪ್ರಾಂಕ್ ಮಾಡಲು ನೋಡುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ.
ತನ್ನ ಆರ್ಟ್‌ವರ್ಕ್ ಅನ್ನು ಆನ್ಲೈನ್ ಮೂಲಕ ತನ್ನ ಶಿಕ್ಷಕರಿಗೆ ಕಳುಹಿಸಲು ಸಜ್ಜಾಗುತ್ತಿರುವ ಡೆಲಾನೆ ಜೋನ್ಸ್‌ಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಕ್ಯಾಮೆರಾ ಸೆಟ್ ಮಾಡಿದ ಕೂಡಲೇ ಅಲೆಕ್ಸಾಗೆ ಬ್ಯಾಗ್ರೌಂಡ್‌ನಲ್ಲಿ ಹಾಡು ಹೇಳಲು ಡೆಲಾನೆ ಹೇಳುತ್ತಾಳೆ.
ಬಾಲಕಿ ತನ್ನ ಪ್ರಾಜೆಕ್ಟ್‌ನಲ್ಲಿ ನಿರತಳಾಗಿರುವ ವೇಳೆಯೇ ಆಕೆಯ ಅಪ್ಪ ಹಾಗೂ ಸಹೋದರರು ಮಧ್ಯೆ ಬಂದು ಭಾರೀ ವಿನೋದಮಯ ಸ್ಟೆಪ್‌ಗಳನ್ನು ಹಾಕಲು ಶುರು ಮಾಡುತ್ತಾರೆ.
ಅಪ್ಪ-ಮಕ್ಕಳ ಈ ಚಿನ್ನಾಟವನ್ನು ಕಂಡು ನಗೆಗಡಲಲ್ಲಿ ಮುಳುಗೆದ್ದ ಡೆಲಾನೆಳ ಅಮ್ಮ, ಈ ಘಟನೆಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ತನ್ನ ಮಗಳು ಹಾಗೇ ಮಿಸ್ ಆಟವಾಡುತ್ತಾ ಅಣುಕು ಆನ್ಲೈನ್ ಕ್ಲಾಸ್‌ನಲ್ಲಿ ಭಾಗಿಯಾಗಿದ್ದಾಳೆ ಎಂದು ಭಾವಿಸಿದ ಆಕೆಯ ಅಪ್ಪ, ಹೀಗೆ ತುಂಟಾಟವಾಡಿದ್ದಾರೆ. ಆದರೆ ಅವರ ಲೆಕ್ಕ ತಪ್ಪಾಗಿ ಹೀಗೆ ಭಾರೀ ವಿನೋದಮಯ ಪ್ರಸಂಗವೊಂದಕ್ಕೆ ಜೋನ್ಸ್ ಫ್ಯಾಮಿಲಿ ಸಾಕ್ಷಿಯಾಗಿದೆ.
https://www.facebook.com/jennifer.jones.547727/videos/10157515811041232/?t=0