ಟ್ವಿಟರ್ನಲ್ಲಿ ಚಾಲ್ತಿಯಲ್ಲಿರುವ “How it started vs How it’s going” ಟ್ರೆಂಡ್ ಭಾರೀ ಜನಪ್ರಿಯವಾಗಿದೆ. ಈ ಟ್ರೆಂಡ್ನಡಿ ಜನ ತಮ್ಮ ಹಳೆಯ ಹಾಗೂ ಹೊಸ ಚಿತ್ರಗಳನ್ನು ಒಂದೆಡೆ ತಂದಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಐರ್ಲೆಂಡ್ನ ಬೆಲ್ಫಾಸ್ಟ್ನ ಅಪ್ಪ-ಮಗಳ ವಿವಿಧ ಹಂತಗಳ ಫೋಟೋವೊಂದು ವೈರಲ್ ಆಗಿದೆ. ಸಿಯಾರಾನ್ ಶನನ್ ಹೆಸರಿನ ಈ ವ್ಯಕ್ತಿ ತನ್ನ ಮಗಳು ನಿಯಾಮ್ ಜೊತೆಗೆ ಜೀವಿತದ ವಿವಿಧ ಅವಧಿಗಳಲ್ಲಿ ಸೆರೆ ಹಿಡಿದಿರುವ ಚಿತ್ರಗಳನ್ನು ಶೇರ್ ಮಾಡಿದ್ದಾರೆ.
ಸೆಪ್ಟೆಂಬರ್ 1999ರಲ್ಲಿ ಶಾಲೆಗೆ ಮೊದಲ ದಿನ ಹೋಗುವಾಗ ಮಗಳೊಂದಿಗೆ ಸೆರೆ ಹಿಡಿದ ಚಿತ್ರ, 2013ರಲ್ಲಿ ಹೈಸ್ಕೂಲ್ ಹಂತದಲ್ಲಿ ಇರುವಾಗ ಒಂದು ಚಿತ್ರ, ಹಾಗೂ 2018ರಲ್ಲಿ ಪದವಿಯ ಗೌನ್ನಲ್ಲಿ ಅದೇ ಮಗಳೊಂದಿಗೆ ತೆಗೆದ ಚಿತ್ರಗಳನ್ನು ಒಂದೆಡೆ ತಂದಿದ್ದಾರೆ ಸಿಯಾರಾನ್. ಈ ಚಿತ್ರಗಳನ್ನು ನಿಯಾಮ್ ತಾಯಿ ಬ್ರೆಂಡಾ ಸೆರೆ ಹಿಡಿದಿದ್ದಾರೆ.