
ಕ್ರಿಸ್ಮಸ್ ಇವ್ನಂದು ಉಪವಾಸ ಆಚರಿಸಿದ ಮಕ್ಕಳಿಗೆ ನೀಡಲಾಗುವ ಸಾಂಪ್ರದಾಯಿಕ ಹಂದಿ ಆಕೃತಿಯ ಗೊಂಬೆಗೆ ಮಾಸ್ಕ್ನ್ನ ಹಾಕಲಾಗಿದೆ. ಪ್ರತಿ ವರ್ಷ ಈ ಅಲಂಕಾರಿಕ ಗೊಂಬೆಯ ಮುಖಕ್ಕೆ ಹೂವಿನ ಚಿತ್ರ ಬಿಡಿಸಲಾಗುತ್ತಿತ್ತು.
ಈ ವರ್ಷದ ಕ್ರಿಸ್ಮಸ್ ಹಬ್ಬವನ್ನ ಜೆಕ್ ಗಣರಾಜ್ಯದ ಜನರು ಹೇಗೆ ಆಚರಿಸುತ್ತಾರೆ ಎನ್ನೋದನ್ನ ತೋರಿಸಲು ಸಾಂಪ್ರದಾಯಿಕ ಹಂದಿ ಗೊಂಬೆಯ ಮುಖದ ಮೇಲೆ ಮಾಸ್ಕ್ ಚಿತ್ರವನ್ನ ಬಿಡಿಸಲಾಗಿದೆ.
ಜೆಕ್ ಜನರ ನಂಬಿಕೆಯ ಪ್ರಕಾರ ಹಂದಿ ಗೊಂಬೆಗಳು ಮನೆಗೆ ಅದೃಷ್ಟ ಹಾಗೂ ಸಂತೋಷವನ್ನ ತಂದು ಕೊಡುತ್ತವೆ. ಈ ಬಾರಿ ಮಾಸ್ಕ್ ಹಂದಿ ಗೊಂಬೆಗೆ ಬೇಡಿಕೆ ದುಪ್ಪಟ್ಟಾಗಿದೆ ಅಂತಾ ಗೊಂಬೆ ತಯಾರಕರು ಹೇಳಿದ್ದಾರೆ.