ಕ್ರಿಶ್ಚಿಯನ್ ಧರ್ಮದಲ್ಲಿ ಜನಿಸುವ ಮಕ್ಕಳಿಗೆ ಬ್ಯಾಪ್ಟಿಸಮ್ ಅಂತಾ ಮಾಡಲಾಗುತ್ತೆ. ಮಗುವಿನ ನಾಮಕರಣ ಮಾಡುವ ಈ ಶಾಸ್ತ್ರದಲ್ಲಿ ಚರ್ಚ್ನ ಫಾದ್ರಿ ಮಗುವಿನ ತಲೆಗೆ ಪವಿತ್ರವಾದ ನೀರನ್ನ ಹಾಕ್ತಾರೆ.
ಆದರೆ ಸಿಪ್ರಸ್ ರಾಷ್ಟ್ರದ ಲಿಮಾಸೊಲ್ನಲ್ಲಿ ಪಾದ್ರಿಯೊಬ್ಬ ಮಗುವಿಗೆ ಪವಿತ್ರ ನೀರನ್ನ ಹಾಕುವ ಭರದಲ್ಲಿ ಕಂದಮ್ಮನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾನೆ.
ಪುಟ್ಟ ಕಂದಮ್ಮನ ತೋಳನ್ನ ಹಿಡಿದ ಪಾದ್ರಿ ಪಾತ್ರೆಯ ಒಳಕ್ಕೆ ಮಗುವನ್ನ ಮುಳುಗಿಸುತ್ತಾನೆ. ಮಗು ಅಳ್ತಾ ಇದ್ರೂ ಸಹ ಕೇಳದ ಪಾದ್ರಿ ಅತ್ಯಂತ ಕ್ರೂರ ರೀತಿಯಲ್ಲಿ ಮಗುವನ್ನ ನಡೆಸಿಕೊಂಡಿದ್ದಾನೆ. ಈ ಕೃತ್ಯದಿಂದ ಮಗುವಿಗೆ ಗಾಯಗಳಾಗಿದ್ದು ಪೋಷಕರು ಪಾದ್ರಿಯ ವಿರುದ್ಧ ಚರ್ಚ್ಗೆ ದೂರು ನೀಡಿದ್ದಾರೆ.