ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು.
ಆದರೆ ಕೆಲವೊಂದು ಮಹಾತ್ ತುಂಟ ಮಕ್ಕಳು ಅದೆಷ್ಟೇ ಜೋಗುಳ ಹಾಡಿದರೂ ಮಲಗಲು ಒಲ್ಲೆ ಎಂದುಕೊಂಡು ಮೊಂಡಾಟ ಮಾಡುತ್ತವೆ. ಇಂಥದ್ದೇ ಮಗುವೊಂದು ತನ್ನ ಅಮ್ಮ ಹಾಡುತ್ತಿರುವ ಜೋಗುಳಕ್ಕೆ ಮಲಗುವುದನ್ನು ಬಿಟ್ಟು ತೊಟ್ಟಿಲಲ್ಲಿ ನಿಂತುಕೊಂಡು ಸ್ಟೆಪ್ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಚೇನ್ ಮಿಲ್ನರ್-ಜೋಸೆಫ್ ಹೆಸರಿನ ಆ ಮಗುವಿನ ತಾಯಿ ಖುದ್ದು ತಾನೇ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದೀಗ ವೈರಲ್ ಆಗಿದೆ.
https://twitter.com/ChaneEmJay/status/1297650245157953537?ref_src=twsrc%5Etfw%7Ctwcamp%5Etweetembed%7Ctwterm%5E1297650245157953537%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fcuteness-overload-little-baby-dances-to-a-lullaby-instead-of-sleeping-viral-video-makes-netizens-day%2F644080