alex Certify ಒಂದು ʼಡಜನ್ʼ‌ ಕೇಳಿದರೆ 12 ಮಾತ್ರ ಕೊಟ್ಟಿದ್ದೀರಿ ಎಂದು ತಕರಾರು: ಗ್ರಾಹಕನ ಮಾತು ಕೇಳಿ ಅಂಗಡಿ ಮಾಲೀಕ ಸುಸ್ತೋಸುಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ʼಡಜನ್ʼ‌ ಕೇಳಿದರೆ 12 ಮಾತ್ರ ಕೊಟ್ಟಿದ್ದೀರಿ ಎಂದು ತಕರಾರು: ಗ್ರಾಹಕನ ಮಾತು ಕೇಳಿ ಅಂಗಡಿ ಮಾಲೀಕ ಸುಸ್ತೋಸುಸ್ತು

ನಿಮ್ಮ ತಪ್ಪಿಲ್ಲ ಅಂದರುನೂ ಸಹ ಕೆಲವೊಮ್ಮೆ ಗ್ರಾಹಕರನ್ನ ತೃಪ್ತಿ ಪಡಿಸೋದು ತುಂಬಾನೇ ಕಷ್ಟವೆನಿಸುತ್ತೆ. ಸಣ್ಣ ಉದ್ಯಮಿಯೊಬ್ಬರು ಇಂತಹದ್ದೇ ಪ್ರಸಂಗವೊಂದರಲ್ಲಿ ವಿಚಿತ್ರ ಅನುಭವ ಪಡೆದಿದ್ದಾರೆ. ಒಂದು ಡಜನ್​ ಫೇಸ್​ ಮಾಸ್ಕ್​​ಗಳನ್ನ ಆರ್ಡರ್​ ಮಾಡಿದ್ದ ಗ್ರಾಹಕನೊಬ್ಬ ತನಗೆ ಕೇವಲ 12 ಮಾಸ್ಕ್​​ ಬಂದಿದೆ ಎಂಬ ಕಾರಣಕ್ಕೆ ವ್ಯಾಪಾರಿ ವಿರುದ್ಧ ದೂರು ದಾಖಲಿಸಿದ್ದಾನೆ.

ನೀವು ಕೂಡ ಈಗ ಗೊಂದಲಕ್ಕೆ ಒಳಗಾದಿರಿ ಅಲ್ಲವೇ..? ಝಾಡಾ ವಾಲ್ಟ್​ನ ಮಾಲೀಕರು ಕೂಡ ಗ್ರಾಹಕನಿಂದ ರಿಫಂಡ್​ಗಾಗಿ ಇ ಮೇಲ್​ ಬಂದಾಗ ಗೊಂದಲಕ್ಕೆ ಒಳಗಾಗಿದ್ದಾರೆ. ಅಮೆರಿಕದ ಝಾಡಾ ಮಾಕ್ರೆ ಮಿನ್ನೆಸೋಟಾದಲ್ಲಿ ಆರ್ಟ್​ ಹಾಗೂ ಕ್ರಾಫ್ಟ್ ಮಳಿಗೆಯನ್ನ ಹೊಂದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ವ್ಯಾಪಾರಿಗೆ ಸೀಮಂತ ಕಾರ್ಯಕ್ರಮಕ್ಕೆ 1 ಡಜನ್​​ ಮಾಸ್ಕ್​ ಬೇಕೆಂದು ಆರ್ಡರ್​ ಬಂದಿತ್ತು. ಅದರಂತೆ ಝಾಡಾ 12 ಮಾಸ್ಕ್​​​ಗಳನ್ನ ತಯಾರಿಸಿಕೊಟ್ಟಿದ್ದರು. ಒಂದು ಮಾಸ್ಕ್​​​ನ ಬೆಲೆ 5 ಡಾಲರ್​ ಆಗಿದ್ದರಿಂದ ಒಟ್ಟು 1 ಡಜನ್​ ಮಾಸ್ಕ್​​ಗೆ 60 ಡಾಲರ್​ ಬಿಲ್​ ಮಾಡಿದ್ದರು.

ಇದಾದ ಬಳಿಕ ಝಾಡಾ ಮಾಸ್ಕ್​​ ಡೆಲಿವರಿಯಲ್ಲಿ ತಪ್ಪಾಗಿದೆ ಎಂಬ ಮೇಲ್ ಸ್ವೀಕರಿಸಿದ್ದಾರೆ. ಝಾಡಾ ಬಹುಶಃ ಮಾಸ್ಕ್​​ನಲ್ಲಿ ದೋಷವಿದೆ ಹೀಗಾಗಿ ದೂರು ಬಂದಿದೆ ಎಂದು ಭಾವಿಸಿದ್ದರು.

‘ಹೆಲೋ, ನಾನು 1 ಡಜನ್ ಮಾಸ್ಕ್​​ಗಳನ್ನ ಆರ್ಡರ್​ ಮಾಡಿದ್ದೆ. ಆದರೆ ನೀವು ಕೇವಲ 12 ಮಾಸ್ಕ್​​ಗಳನ್ನ ಕಳುಹಿಸಿದ್ದೀರಿ. ಹೀಗಾಗಿ ನನಗೆ ಹಣವನ್ನ ಮರುಪಾವತಿ ಮಾಡಿ ಎಂದು ಅತೃಪ್ತ ಗ್ರಾಹಕ ಮೇಲ್​ ಮಾಡಿದ್ದರು.

ಈ ಮೇಲ್​ ಸ್ವೀಕರಿಸಿದ ಬಳಿಕ ಝಾಡಾ 1 ಡಜನ್​ ಅಂದರೆ 12 ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಗ್ರಾಹಕರನ್ನ ತೃಪ್ತಿ ಪಡಿಸೋದು ವ್ಯಾಪಾರಿಗಳ ಕರ್ತವ್ಯ ಎಂಬ ಮಾತಿನಂತೆ ಮಾಡದ ತಪ್ಪಿಗೆ ಝಾಡಾ ಕ್ಷಮೆಯನ್ನಾಚಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...