
ಗ್ರಾಹಕರೊಬ್ಬರು $2020 ಗಳ ಭಾರೀ ಟಿಪ್ ಕೊಟ್ಟ ಬಳಿಕ ಅಮೆರಿಕ ಮೂಲದ ಭಾರತೀಯ ರೆಸ್ಟೋರೆಂಟ್ ಒಂದಕ್ಕೆ ಹೊಸ ವರ್ಷದ ಸಂಭ್ರಮಾಚರಣೆಯ ಖುಷಿ ಡಬಲ್ ಆಗಿದೆ.
ಫ್ಲಾರಿಡಾದ ಕೇಪ್ ಕೋರಲ್‌ನಲ್ಲಿರುವ ’ಮಸಾಲಾ ಮಂತ್ರ’ ಹೆಸರಿನ ಭಾರತೀಯ ರೆಸ್ಟೋರೆಂಟ್ ಒಂದು ತನ್ನ ಈ ಬಿಲ್ ಅನ್ನು ಸಾಮಾಜಿಕ ಜಾಲತಾಣದೊಂದಿಗೆ ಶೇರ್ ಮಾಡಿಕೊಂಡಿದೆ. ಈ ಗ್ರಾಹಕ ಸೇವಿಸಿದ ಊಟ ಹಾಗೂ ಪಾನೀಯಗಳ ಒಟ್ಟು ಮೊತ್ತ, ತೆರಿಗೆ ಸೇರಿ, $269 ಆದರೆ, ಆತ ಅದರ 7-8 ಪಟ್ಟು ಮೊತ್ತವನ್ನು ಟಿಪ್ ರೂಪದಲ್ಲೇ ಕೊಟ್ಟಿದ್ದಾನೆ.
ಡಾನ್ ಹೆಸರಿನ ಸರ್ವರ್‌ಗೆ ಈ ಟಿಪ್ ಕೊಡಲಾಗಿದ್ದು, “ಈ ರೀತಿಯ ಜನರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕಿರುವ ಪೋಸ್ಟ್‌ನಲ್ಲಿ ಈ ರೆಸ್ಟೋರೆಂಟ್ ತಿಳಿಸಿದೆ.