ತನ್ನನ್ನು ತಾನು ಏಸು ಕ್ರಿಸ್ತನ ಮರು ಅವತಾರ ಎಂದು ಹೇಳಿಕೊಳ್ಳುತ್ತಿದ್ದ ವ್ಯಕ್ತಿಯೊಬ್ಬನನ್ನು ರಷ್ಯಾದ ಸೇನಾ ಸಿಬ್ಬಂದಿ ಬಂಧಿಸಿದ್ದಾರೆ.
ತನ್ನ ಅನುಯಾಯಿಗಳ ದುಡ್ಡನ್ನು ಬಳಸಿಕೊಂಡು ಮನೋಬೌದ್ಧಿಕ ಹಿಂಸಾಚಾರದ ಮೂಲಕ ಅಮಾಯಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಆಪಾದನೆ ಮೇಲೆ ಈತನನ್ನು ಬಂಧನಕ್ಕೆ ಪಡೆಯಲು ಮಿಲಿಟರಿ ಶೈಲಿ ಕಾರ್ಯಾಚರಣೆಯನ್ನೇ ನಡೆಸಲಾಗಿದೆ.
ರಷ್ಯಾದ ವಾಯುಪಡೆಯಲ್ಲಿ ಕೆಲಸ ಮಾಡಿರುವ ಸರ್ಗೈ ಟೊರೋಪ್ ಹೆಸರಿನ ಈತ, ತಾನು 1990ರಲ್ಲಿ ಏಸು ಕ್ರಿಸ್ತನ ಅವತಾರವಾಗಿ ಜನಿಸಿರುವುದಾಗಿ ಹೇಳಿಕೊಂಡು ಜನರಿಗೆ ವಂಚಿಸುತ್ತಾ ಬಂದಿದ್ದಾನೆ. ಟೊರೋಪ್ ಹಾಗೂ ಆತನ ಸ್ನೇಹಿತ ವಾಡಿಮ್ ರೆಡ್ಕಿನ್ನನ್ನು ವಶಕ್ಕೆ ಪಡೆಯಲು ಹೆಲಿಕಾಪ್ಟರ್ಗಳು, ವ್ಯಾನುಗಳು ಹಾಗೂ ಭಾರೀ ಸಂಖ್ಯೆಯಲ್ಲಿ ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಈತನ ಬಂಧನದ ಫುಟೇಜ್ ಈಗ ವೈರಲ್ ಆಗಿದೆ.