ನಮ್ಮಲ್ಲಿ ಸಾಮಾನ್ಯವಾಗಿ ಕಾಗೆಗಳ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳು ಮೊದಲಿನಿಂದಲೂ ಸಾಕಷ್ಟು ಇವೆ. ಕಾಗೆಗಳು ನಮಗೆ ದುರದೃಷ್ಟ ಹೊತ್ತು ತರುತ್ತವೆ ಎಂಬೆಲ್ಲಾ ಮಾತುಗಳನ್ನು ಕೇಳುತ್ತಲೇ ನಾವೆಲ್ಲಾ ದೊಡ್ಡವರಾಗಿ ಬೆಳೆದಿದ್ದೇವೆ.
ಆದರೆ ಸಿಯಾಟಲ್‌ನ ಸಂಶೋಧಕರು ಅಚ್ಚರಿಯ ವಿಷಯವೊಂದನ್ನು ಕಂಡು ಹಿಡಿದಿದ್ದಾರೆ. ಕಾಗೆಗಳೂ ಸಹ ಬಹು ದೀರ್ಘ ಕಾಲದವರೆಗೂ ಸೇಡಿಗಾಗಿ ಕಾಯಬಲ್ಲವು ಎಂದು ಈ ಸಂಶೋಧಕರು ತಿಳಿಸಿದ್ದಾರೆ.
ಇಷ್ಟು ಮಾತ್ರವಲ್ಲದೇ, ಕಾಗೆಗಳೂ ಸಹ ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದಲ್ಲದೇ, ಕೆಲವು ಬಗೆಯ ಉಪಕರಣಗಳನ್ನೂ ಸಹ ಬಳಸಬಲ್ಲವು ಎಂದು ತಿಳಿದುಬಂದಿದೆ.
ಕಾಗೆಗಳು ಸಹ ಮಾನವರಂತೆ ಆಲೋಚನೆ ಮಾಡುವುದಲ್ಲದೇ ಮುಖಗಳನ್ನು ನೆನಪಿಟ್ಟುಕೊಳ್ಳಬಹುದು ಎಂದು ಸಂಶೋಧಕ ಜಾನ್ ಮಾರ್ಝಲಫ್ ತಿಳಿಸಿದ್ದರು.