ಆಸ್ಟ್ರೇಲಿಯಾದಲ್ಲಿ ದೈತ್ಯ ಮೊಸಳೆಯೊಂದು ಪತ್ತೆಯಾಗಿದೆ. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯ ಪ್ರವಾಸಿ ತಾಣದಲ್ಲಿ ಬರೋಬ್ಬರಿ 4.4 ಮೀಟರ್ ಉದ್ದದ 350 ಕೆಜಿ ತೂಕದ ಮೊಸಳೆ ಸಿಕ್ಕಿದೆ.
ಫ್ಲೋರಾ ನದಿಗೆ ಹೊಂದಿಕೊಂಡ ಪ್ರದೇಶದಲ್ಲಿ ಈ ಬೃಹತ್ ಗಾತ್ರದ ಮೊಸಳೆ ಕಂಡುಬಂದಿದೆ ಎಂದು ಕ್ಯಾಥರಿನ್ ಹಿರಿಯ ವನ್ಯಜೀವಿ ರೇಂಜರ್ ಜಾನ್ ಬರ್ಕ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಉತ್ತರ ಭಾಗದ ಉಷ್ಣವಲಯದ ಪ್ರದೇಶದಲ್ಲಿ ಮೊಸಳೆ ಹೆಚ್ಚಾಗಿವೆ. ಸೆರೆಹಿಡಿದಿರುವ ಬೃಹತ್ ಗಾತ್ರದ ಮೊಸಳೆಯನ್ನು ಸಂತಾನೋತ್ಪತ್ತಿ ಕಾರ್ಯಕ್ರಮದ ಭಾಗವಾಗಿ ಮೊಸಳೆ ಪಾರ್ಕ್ ಗೆ ತರಲಾಗಿದೆ.
ಫ್ಲೊರಾ ರಿವರ್ ನೇಚರ್ ಪಾರ್ಕ್ ನಲ್ಲಿ ಪ್ರವಾಸಿಗರು ಓಡಾಡುವ ಸ್ಥಳದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.